ತರೀಕೆರೆ: ‘ವಿಧವೆಯರು ತಮ್ಮ ಹಕ್ಕನ್ನು ಪಡೆದುಕೊಳ್ಳಬೇಕು ಮತ್ತು ಕುಟುಂಬದಲ್ಲಿ ಆರ್ಥಿಕ ಸಬಲೀಕರಣ ಸಾಧಿಸಬೇಕು’ ಎಂದು ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್ ಸಂಸ್ಥೆಯ ತಾಲ್ಲೂಕು ಘಟಕದ ಅಧ್ಯಕ್ಷೆ ಆಶಾ ಬೋಸ್ಲೆ ಹೇಳಿದರು.
ಸಂಸ್ಥೆ ವತಿಯಿಂದ ತಾಲ್ಲೂಕಿನ ಬೇಲೇನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಎ. ರಂಗಾಪುರ ಗ್ರಾಮದಲ್ಲಿ ನಡೆದ ವಿಧವೆಯರ ಸಬಲೀಕರಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಗೆ ಬಲಿಯಾದವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಸಂಸ್ಥೆಯ ಖಜಾಂಚಿ ಯಶೋಧಾ ಆಂಜನೇಯ ಮಾತನಾಡಿ, ‘ವಿಧವೆಯರು ಆರ್ಥಿಕ ಸಬಲೀಕರಣದತ್ತ ಹೆಜ್ಜೆ ಇರಿಸಬೇಕು’ ಎಂದರು.
ಸಾಕ್ಷರತಾ ಅಧಿಕಾರಿ ಎನ್.ಎಸ್. ಜಯಣ್ಣ, ದ ಹಂಗರ್ ಪ್ರಾಜೆಕ್ಟ್ ಸಂಸ್ಥೆಯ ಸಂಯೋಜಕ ಶ್ರೀನಿವಾಸ್, ನಾಗವೇಣಿ ಮಾತನಾಡಿದರು.
ಗ್ರಾಮ ಪಂಚಾಯಿತಿ ಸದಸ್ಯೆ ಸುಂಕಮ್ಮ, ಸಮಾಜ ಸೇವಕಿ ಶ್ರುತಿ ಭಾಗವಹಿಸಿದ್ದರು. ವೀಣಾ ಸುರೇಶ್ ಸ್ವಾಗತಿಸಿದರು. ಕಾರ್ಯದರ್ಶಿ ರಾಜೇಶ್ವರಿ ಸೀತಾರಾಂ ವಂದಿಸಿದರು. ಸದಸ್ಯರಾದ ಹೇಮಾ ಉಮೇಶ್, ಮಮತಾ ಮಲ್ಲಿಕಾರ್ಜುನ್, ಶೋಭಾ, ಶಾಂತಾ, ರಾಜೇಶ್ವರಿ ಅಣ್ಣಯ್ಯ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.