ADVERTISEMENT

ತಾಲ್ಲೂಕು ಮಟ್ಟದಲ್ಲಿ ಮಾತ್ರ ಅಥ್ಲೆಟಿಕ್ಸ್

ಪೋಷಕರು, ಶಿಕ್ಷಕರ ಅಸಮಾಧಾನ

ರವಿ ಕೆಳಂಗಡಿ
Published 19 ಆಗಸ್ಟ್ 2022, 5:12 IST
Last Updated 19 ಆಗಸ್ಟ್ 2022, 5:12 IST
ಕಳಸದ ಕೆಪಿಎಸ್ ಶಾಲೆಯಲ್ಲಿ ಗುರುವಾರ ನಡೆದ ವಲಯ ಮಟ್ಟದ ಪ್ರಾಥಮಿಕ ಶಾಲಾ ಕ್ರೀಡಾಕೂಟದ ಬಾಲಕಿಯರ ಕಬಡ್ಡಿ ಪಂದ್ಯ
ಕಳಸದ ಕೆಪಿಎಸ್ ಶಾಲೆಯಲ್ಲಿ ಗುರುವಾರ ನಡೆದ ವಲಯ ಮಟ್ಟದ ಪ್ರಾಥಮಿಕ ಶಾಲಾ ಕ್ರೀಡಾಕೂಟದ ಬಾಲಕಿಯರ ಕಬಡ್ಡಿ ಪಂದ್ಯ   

ಕಳಸ: ವಲಯ ಮಟ್ಟದಲ್ಲಿ ಪ್ರತಿವರ್ಷ ನಡೆಯುತ್ತಿದ್ದ ಪ್ರಾಥಮಿಕ ಶಾಲೆಗಳ ಮತ್ತು ಪ್ರೌಢಶಾಲೆಗಳ ಕ್ರೀಡಾಕೂಟದ ಅಥ್ಲೆಟಿಕ್ಸ್, ಈ ಬಾರಿ ತಾಲ್ಲೂಕು ಮಟ್ಟದಲ್ಲಿ ಮಾತ್ರ ನಡೆಸುವ ಶಿಕ್ಷಣ ಇಲಾಖೆ ತೀರ್ಮಾನಕ್ಕೆ ಅಸಮಾಧಾನ ವ್ಯಕ್ತವಾಗಿದೆ.

ಕಳಸದಲ್ಲಿ ಗುರುವಾರ ನಡೆದ ವಲಯ ಮಟ್ಟದ ಕ್ರೀಡಾಕೂಟದಲ್ಲಿ ತಂಡದ ಆಟಗಳಾದ ವಾಲಿಬಾಲ್, ಥ್ರೋಬಾಲ್, ಕೊಕ್ಕೊ, ಕಬಡ್ಡಿ ಮಾತ್ರ ಆಡಿಸಲಾಯಿತು.

ಅಥ್ಲೆಟಿಕ್ಸ್‌ ಮೂಡಿಗೆರೆಯಲ್ಲಿ ನಡೆಯಲಿದ್ದು, ತಾಲ್ಲೂಕು ಮಟ್ಟದಲ್ಲೇ ನೇರವಾಗಿ ಸ್ಪರ್ಧಿಸಬೇಕು ಎಂಬ ಸೂಚನೆ ಶಾಲೆಗಳಿಗೆ ಬಂದಿದೆ.

ADVERTISEMENT

ಕಳಸ ಮತ್ತು ಮೂಡಿಗೆರೆ ತಾಲ್ಲೂಕಿನಲ್ಲಿ 65 ಪ್ರಾಥಮಿಕ ಶಾಲೆಗಳು ಮತ್ತು 33 ಪ್ರೌಢಶಾಲೆಗಳು ಇವೆ. ಈ ಎಲ್ಲ ಶಾಲೆಗಳ ಮಕ್ಕಳು ಒಂದೇ ಬಾರಿಗೆ ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಬೇಕಾಗಿದೆ. ಏಕಕಾಲಕ್ಕೆ ವ್ಯವಸ್ಥೆ ಮಾಡಲು ಮೂಲಸೌಕರ್ಯದ ಬಗ್ಗೆ ಪ್ರಶ್ನೆ ಎದುರಾಗಿದೆ.

‘ಮಕ್ಕಳು ಮೊದಲು ವಲಯ ಮಟ್ಟದಲ್ಲಿ ಸ್ಪರ್ಧಿಸಿದರೆ, ಉತ್ಸಾಹ ಹೆಚ್ಚುತ್ತದೆ. ಪ್ರೇರಣೆಯೂ ಹೆಚ್ಚು. ಏಕಾಏಕಿ ತಾಲ್ಲೂಕು ಮಟ್ಟದಲ್ಲಿ ಸ್ಪರ್ಧಿಸುವುದು ಈ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಕಷ್ಟ’ ಎಂದು ಶಿಕ್ಷಕರೊಬ್ಬರು ತಿಳಿಸಿದರು.

ಸಂಸೆಯಲ್ಲಿ ಸೆಪ್ಟೆಂಬರ್ ಮೊದಲ ವಾರ ಪ್ರೌಢಶಾಲಾ ಮಟ್ಟದ ಕ್ರೀಡಾಕೂಟ ನಡೆಯಲಿದೆ.ಅಲ್ಲಿ ಕಳಸ ತಾಲ್ಲೂಕಿನ ಶಾಲೆಗಳಿಗೆ ತಂಡದ ಸ್ಪರ್ಧೆಗಳ ಜೊತೆಗೆ ಅಥ್ಲೆಟಿಕ್ಸ್ ಕೂಡ ನಡೆಸಬೇಕು ಎಂಬ ಬೇಡಿಕೆಯೂ ಕೇಳಿಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.