ADVERTISEMENT

ಲಾರ್ವ ಸಮೀಕ್ಷಾ ಅಭಿಯಾನಕ್ಕೆ ಎ.ಸಿ ಚಾಲನೆ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2024, 15:23 IST
Last Updated 10 ಆಗಸ್ಟ್ 2024, 15:23 IST
ಡೆಂಗಿ ನಿಯಂತ್ರಿಸಲು ಲಾರ್ವ ಸಮೀಕ್ಷಾ ಅಭಿಯಾನಕ್ಕೆ ಉಪ ವಿಭಾಗಾಧಿಕಾರಿ ಡಾ.ಕೆ.ಜೆ. ಕಾಂತರಾಜ್ ಚಾಲನೆ ನೀಡಿದರು
ಡೆಂಗಿ ನಿಯಂತ್ರಿಸಲು ಲಾರ್ವ ಸಮೀಕ್ಷಾ ಅಭಿಯಾನಕ್ಕೆ ಉಪ ವಿಭಾಗಾಧಿಕಾರಿ ಡಾ.ಕೆ.ಜೆ. ಕಾಂತರಾಜ್ ಚಾಲನೆ ನೀಡಿದರು   

ತರೀಕೆರೆ: ಪಟ್ಟಣದ ಬಯಲು ರಂಗಮಂದಿರದಲ್ಲಿ ‘ಲಾರ್ವ ಸಮೀಕ್ಷಾ ಅಭಿಯಾನ’ಕ್ಕೆ ಉಪ ವಿಭಾಗಾಧಿಕಾರಿ ಡಾ.ಕೆ.ಜೆ. ಕಾಂತರಾಜ್ ಚಾಲನೆ ನೀಡಿದರು.

ತರೀಕೆರೆ ಮತ್ತು ಅಜ್ಜಂಪುರ ಪಟ್ಟಣದಲ್ಲಿ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ, ಕಂದಾಯ, ಆರೋಗ್ಯ ಇಲಾಖೆ, ಪುರಸಭೆ, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ವಿವಿಧ ಸಂಘ–ಸಂಸ್ಥೆಗಳ ಸಹಯೋಗದಲ್ಲಿ ‘ಡೆಂಗಿ ನಿಯಂತ್ರಿಸಲು ಲಾರ್ವ ಸಮೀಕ್ಷಾ ಅಭಿಯಾನ’ವನ್ನು ಹಮ್ಮಕೊಳ್ಲಲಾಗಿತ್ತು.

ತಹಶೀಲ್ದಾರ್ ವಿ.ಎಸ್. ರಾಜೀವ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಚಂದ್ರಶೇಖರ್ ಬಿ.ಜಿ, ಪುರಸಭಾ ಮುಖ್ಯಾಧಿಕಾರಿ ಪ್ರಶಾಂತ್, ಸಿಡಿಪಿಒ ಚರಣ್ ರಾಜ್, ಸಾರ್ವಜನಿಕ ಆಸ್ಪತ್ರೆಯ ಮುಖ್ಯ ಆಡಳಿತ ವೈದ್ಯಾಧಿಕಾರಿ ಡಾ. ದೇವರಾಜ, ರೇಡಿಯಾಲಜಿಸ್ಟ್ ಡಾ. ನಾಗರಾಜ್ ಇದ್ದರು.

ADVERTISEMENT

ತರೀಕೆರೆ ಪಟ್ಟಣದಲ್ಲಿ 8,010 ಮತ್ತು ಅಜ್ಜಂಪುರ ಪಟ್ಟಣದಲ್ಲಿ 3,115 ಮನೆಗಳಿಗೆ ಭೇಟಿ ನೀಡಲಾಯಿತು. ಎರಡು ಪಟ್ಟಣಗಳ 343 ಮನೆಗಳಲ್ಲಿ ಡೆಂಗಿ ಹರಡುವ ಈಡೀಸ್ ಸೊಳ್ಳೆಯ ಲಾರ್ವಗಳು ಕಂಡುಬಂದಿದ್ದು, ಲಾರ್ವ ಉತ್ಪತ್ತಿ ತಾಣಗಳನ್ನು ನಾಶಪಡಿಸಿ ಡೆಂಗಿ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.