ADVERTISEMENT

₹15 ಲಕ್ಷ ನರೇಗಾ ಕಾಮಗಾರಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 13 ಜೂನ್ 2025, 15:47 IST
Last Updated 13 ಜೂನ್ 2025, 15:47 IST
ನಂದಿಬಟ್ಟಲು ಗ್ರಾ.ಪಂ ವ್ಯಾಪ್ತಿಯ ಸೈದುಖಾನ್ ಗ್ರಾಮದಲ್ಲಿ ₹15 ಲಕ್ಷ ವೆಚ್ಚದಲ್ಲಿ ನರೇಗಾ ಯೋಜನೆಯ ಬಾಕ್ಸ್ ಚರಂಡಿ ಕಾಮಗಾರಿಗೆ ಗ್ರಾ.ಪಂ. ಅಧ್ಯಕ್ಷ ಎನ್.ಜೆ. ಭದ್ರೇಗೌಡ, ಪಿ.ಡಿ.ಒ ನಾಗರಾಜಪ್ಪ ಎನ್.ಎಸ್. ಚಾಲನೆ ನೀಡಿದರು
ನಂದಿಬಟ್ಟಲು ಗ್ರಾ.ಪಂ ವ್ಯಾಪ್ತಿಯ ಸೈದುಖಾನ್ ಗ್ರಾಮದಲ್ಲಿ ₹15 ಲಕ್ಷ ವೆಚ್ಚದಲ್ಲಿ ನರೇಗಾ ಯೋಜನೆಯ ಬಾಕ್ಸ್ ಚರಂಡಿ ಕಾಮಗಾರಿಗೆ ಗ್ರಾ.ಪಂ. ಅಧ್ಯಕ್ಷ ಎನ್.ಜೆ. ಭದ್ರೇಗೌಡ, ಪಿ.ಡಿ.ಒ ನಾಗರಾಜಪ್ಪ ಎನ್.ಎಸ್. ಚಾಲನೆ ನೀಡಿದರು   

ತರೀಕೆರೆ: ನಂದಿಬಟ್ಟಲು ಗ್ರಾ.ಪಂ. ವ್ಯಾಪ್ತಿಯ ಗ್ರಾಮಗಳಲ್ಲಿ ಮೂಲಭೂತ ಸೌಲಭ್ಯಗಳ ಕಾಮಗಾರಿಗಳನ್ನು ಆದ್ಯತೆ ಮೇಲೆ ಕೈಗೆತ್ತಿಕೊಳ್ಳಲಾಗುತ್ತಿದ್ದು, ಎಲ್ಲಾ ಗ್ರಾಮಗಳಿಗೂ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ, ಕಾಂಕ್ರೀಟ್ ರಸ್ತೆ, ಬಾಕ್ಸ್ ಚರಂಡಿ ನಿರ್ಮಾಣ ಮುಂತಾದ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದು ನಂದಿಬಟ್ಟಲು ಗ್ರಾ.ಪಂ. ಅಧ್ಯಕ್ಷ ಎನ್.ಜಿ. ಭದ್ರೇಗೌಡ ಹೇಳಿದರು.

ಸೈದುಖಾನ್ ಗ್ರಾಮದಲ್ಲಿ ₹15 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಬಾಕ್ಸ್ ಚರಂಡಿ ಕಾಮಗಾರಿಯನ್ನು ನರೇಗಾ ಯೋಜನೆಯಡಿ ಮಾಡಲು ತೀರ್ಮಾನಿಸಲಾಗಿದ್ದು, ಗ್ರಾಮಸ್ಥರು ನರೇಗಾ ಕಾಮಗಾರಿ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ಹೆಸರನ್ನು ನೋಂದಾಯಿಸಿಕೊಳ್ಳಬಹುದು ಎಂದರು.

ನಂದಿಬಟ್ಟಲು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎನ್.ಎಸ್. ನಾಗರಾಜಪ್ಪ, ಸದಸ್ಯೆ ಲತಾಮಣಿ, ನಿವೃತ್ತ ಯೋಧ ಸುಬ್ರಹ್ಮಣಿ, ಸುಬ್ಬಯ್ಯ, ಚಂದ್ರಪ್ಪ, ಗ್ರಾ.ಪಂ. ಸಿಬ್ಬಂದಿ ಆರ್. ರಾಜೇಶ್, ಎನ್. ರವಿ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.