ADVERTISEMENT

ಶೃಂಗೇರಿ: ಕನ್ನಡಕ್ಕಾಗಿ ದುಡಿದವರು ಶಿಕ್ಷಕ ಮಂಜುನಾಥ ಗೌಡರು; ಕುಂದೂರು ಅಶೋಕ್

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2025, 5:49 IST
Last Updated 4 ನವೆಂಬರ್ 2025, 5:49 IST
ಶೃಂಗೇರಿಯ ಪಟ್ಟಣದ ಮಂಜುನಾಥಗೌಡ ಅವರ ಮನೆಯಂಗಳದಲ್ಲಿ ಕರ್ನಾಟಕ ವಿಕಾಸ ರಂಗ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಆಯೋಜಿಸಿದ್ದ ಕನ್ನಡಕ್ಕಾಗಿ ದುಡಿದವರು ಎಂಬ ಕಾರ್ಯಕ್ರಮದಲ್ಲಿ ಶಿಕ್ಷಕ ಮಂಜುನಾಥ ಗೌಡ ಅವರನ್ನು ಸನ್ಮಾನಿಸಿದರು
ಶೃಂಗೇರಿಯ ಪಟ್ಟಣದ ಮಂಜುನಾಥಗೌಡ ಅವರ ಮನೆಯಂಗಳದಲ್ಲಿ ಕರ್ನಾಟಕ ವಿಕಾಸ ರಂಗ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಆಯೋಜಿಸಿದ್ದ ಕನ್ನಡಕ್ಕಾಗಿ ದುಡಿದವರು ಎಂಬ ಕಾರ್ಯಕ್ರಮದಲ್ಲಿ ಶಿಕ್ಷಕ ಮಂಜುನಾಥ ಗೌಡ ಅವರನ್ನು ಸನ್ಮಾನಿಸಿದರು   

ಶೃಂಗೇರಿ: ‘ಕುರ್ಚಿ ಜೋಡಿಸಿ ಬ್ಯಾನರ್ ಕಟ್ಟುವುದು, ಅತಿಥಿಗಳನ್ನು ಬರಮಾಡಿಕೊಂಡು ಕನ್ನಡಕ್ಕಾಗಿ ಬಾವುಟ ಹಿಡಿದು ಕನ್ನಡ ಕಟ್ಟಿದವರು ಶಿಕ್ಷಕ ಮಂಜುನಾಥ ಗೌಡರು’ ಎಂದು ಕರ್ನಾಟಕ ವಿಕಾಸ ರಂಗದ ಅಧ್ಯಕ್ಷ ಕುಂದೂರು ಅಶೋಕ್ ಹೇಳಿದರು.

ಶೃಂಗೇರಿಯ ಪಟ್ಟಣದ ಮಂಜುನಾಥಗೌಡ ಅವರ ಮನೆಯಂಗಳದಲ್ಲಿ ಕರ್ನಾಟಕ ವಿಕಾಸ ರಂಗ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಆಯೋಜಿಸಿದ್ದ ಕನ್ನಡಕ್ಕಾಗಿ ದುಡಿದವರು ಎಂಬ ಕಾರ್ಯಕ್ರಮದಲ್ಲಿ ಶಿಕ್ಷಕ ಮಂಜುನಾಥ ಗೌಡ ಅವರನ್ನು ಅಭಿನಂದಿಸಿ ಅವರು ಮಾತನಾಡಿದರು.

ತೆರೆಮರೆಯಲ್ಲಿ ದುಡಿದ ಮಂಜುನಾಥ ಗೌಡ ಅವರು ಕನ್ನಡದ ಕಟ್ಟಾಳು. ಕನ್ನಡ ಪಂಡಿತರಾಗಿ ಸಂಬಳಕ್ಕೆ ಸೀಮಿತವಾಗದೆ ಕನ್ನಡ ಪರಿಚಾರಿಕೆ ಮಾಡಿದವರು ಎಂದರು.

ADVERTISEMENT

ಪರಿಸರವಾದಿ ಕಲ್ಕುಳಿ ವಿಠಲ್ ಹೆಗ್ಗಡೆ ಮಾತನಾಡಿ, ಶೃಂಗೇರಿಯ ಎಲ್ಲ ಕನ್ನಡದ ಕೆಲಸಗಳಲ್ಲಿಯೂ ಮಂಜುನಾಥಗೌಡ ಮುಂಚೂಣಿಯಲ್ಲಿ ಇರುತ್ತಾರೆ. ಅವರೆಂದೂ ಸನ್ಮಾನ, ಪ್ರಶಸ್ತಿಗಾಗಿ ಕನ್ನಡದ ಪರಿಚಾರಿಕೆ ಮಾಡಿದವರಲ್ಲ ಎಂದರು.

ಕಾರ್ಯಕ್ರಮದಲ್ಲಿ ಡಾ.ಮೋಹನ್ ಕುಮಾರ್, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್.ಎಸ್ ಸುಬ್ರಹ್ಮಣ್ಯ,
ಎಚ್.ಎ.ಪ್ರಕಾಶ್, ಅಂಗುರ್ಡಿ ದಿನೇಶ್, ಛಾಯಾಪತಿ, ಸಂತೋಷ್ ಕಾಳ್ಯ ಭಾಗವಹಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.