ಚಿಕ್ಕಮಗಳೂರು: ನಗರದ ರೈಲ್ವೆ ನಿಲ್ದಾಣ ರಸ್ತೆಯಲ್ಲಿ ಹುಲಿ ಉಗುರು, ಹಲ್ಲು ಮಾರಾಟ ಯತ್ನದಲ್ಲಿ ತೊಡಗಿದ್ದ ಇಬ್ಬರನ್ನು ಬಂಧಿಸಿ, ಮಾಲು ವಶಪಡಿಸಿಕೊಳ್ಳಲಾಗಿದೆ.
ಹಾಸನ ತಾಲ್ಲೂಕಿನ ಅಂಬುಗ ಗ್ರಾಮದ ಎಸ್.ಲೋಕೇಶ್, ಚಿಕ್ಕಮಗಳೂರು ತಾಲ್ಲೂಕಿನ ಅರಿಸಿನಗುಪ್ಪೆಯ ಸಾಗರ್ ಬಂಧಿತರು. ಎಂಟು ಉಗುರುಗಳು, ಚರ್ಮದ ತುಣುಕು, ಒಂದು ಕೋರೆ ಹಲ್ಲು, ನಾಲ್ಕು ಹಲ್ಲುಗಳು, ಕೃತ್ಯಕ್ಕೆ ಬಳಸಿ ವಶಪಡಿಸಿಕೊಳ್ಳಲಾಗಿದೆ.
ಡಿಸಿಐಬಿ ವಿಭಾಗದ ಇನ್‌ಸ್ಪೆಕ್ಟರ್ ಕೆ.ಸತ್ಯನಾರಾಯಣ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.