
ಅಜ್ಜಂಪುರ: ತಾಲ್ಲೂಕಿನ ಶಿವನಿ ಆರ್.ಎಸ್.ನಲ್ಲಿ ವಾಸ್ಕೋ ಎಕ್ಸ್‌ಪ್ರೆಸ್ ರೈಲು ನಿಲುಗಡೆಗೆ ಅನುಮತಿ ದೊರೆತಿದೆ. ನ. 2ರಂದು ರೈಲ್ವೆ ಖಾತೆ ಸಚಿವ ವಿ. ಸೋಮಣ್ಣ ರೈಲು ನಿಲುಗಡೆಗೆ ಹಸಿರು ನಿಶಾನೆ ತೋರಲಿದ್ದಾರೆʼ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಶಂಭೈನೂರು ಆನಂದಪ್ಪ ತಿಳಿಸಿದರು.
ವಾಸ್ಕೊ-ಯಶವಂತಪುರ ರೈಲು ಗ್ರಾಮದ ರೈಲು ನಿಲ್ದಾಣಕ್ಕೆ ಬೆ. 8.30ಕ್ಕೆ ಬಂದು, 8.32ಕ್ಕೆ ನಿರ್ಮಿಸಲಿದೆ ಹಾಗೂ ಯಶವಂತಪುರ-ವಾಸ್ಕೋ ಕಡೆಗೆ ಸಾಗುವಾಗ ಸಂಜೆ 6.11ಕ್ಕೆ ಬಂದು, 6.12ಕ್ಕೆ ನಿರ್ಗಮಿಸಲಿದೆ.
ಈ ಸಂಬಂಧ ನಡೆಯುವ ಕಾರ್ಯಕ್ರಮಕ್ಕಾಗಿ ಸಚಿವ ವಿ. ಸೋಮಣ್ಣ, ಶಿವನಿ ಆರ್.ಎಸ್.ಗೆ ಸಂಜೆ 4ಕ್ಕೆ ಬರಲಿದ್ದಾರೆ. ಜತೆಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ, ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ, ಬೋಜೇಗೌಡ, ಪರಿಷತ್ ಉಪ ಸಭಾಪತಿ ಪ್ರಾಣೇಶ್, ಬಿಜೆಪಿ ಮುಖಂಡ ಚಿಕ್ಕಾನವಂಗಲದ ಸಿ.ಎಂ. ರಾಜಪ್ಪ ಪಾಲ್ಗೊಳ್ಳಲಿದ್ದಾರೆ.
ಸಚಿವರು, ಇದೇ ವೇಳೆ ಗ್ರಾಮದ ರೈಲ್ವೆ ಕೆಳ ಸೇತುವೆಯಿಂದ-ಹೊಸದುರ್ಗ ರಸ್ತೆಯ ರೈಲ್ವೆ ಗೇಟ್‌ವರೆಗಿನ 1.3 ಕಿ.ಮೀ. ಉದ್ದದ ರಸ್ತೆಯನ್ನು ಕಾಂಕ್ರೀಟ್ ರಸ್ತೆಯಾಗಿ ಪರಿವರ್ತಿಸುವ ₹2.28 ಕೋಟಿ ವೆಚ್ಚದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸುವರು.
ಶಿವನಿ ಆರ್.ಎಸ್.ನಲ್ಲಿ ವಾಸ್ಕೋ ರೈಲು ನಿಲುಗಡೆಗೊಳಿಸುವಂತೆ ಮಾಡಿದ ಮನವಿಗೆ ಸಚಿವರು ಸ್ಪಂದಿಸಿದ್ದು, ಈ ಭಾಗದ ಜನರ ಬಹುದಿನಗಳ ಬೇಡಿಕೆ ಈಡೇರಿಸಿದ್ದಾರೆ. ಇದಕ್ಕೆ ಸಹಕಾರ ನೀಡಿದ ಬಿಜೆಪಿ ಮುಖಂಡ ಚಿಕ್ಕನಾವಂಗಲದ ರಾಜಪ್ಪ ಅವರಿಗೂ ಕೃತಜ್ಞತೆಗಳು ಎಂದು ಆನಂದಪ್ಪ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.