ADVERTISEMENT

ಚಿಕ್ಕಮಗಳೂರು: ಕನ್ನಡ ವೀಣಾ ಕಾರ್ಯಕ್ರಮ ನ.10ಕ್ಕೆ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2025, 4:29 IST
Last Updated 8 ನವೆಂಬರ್ 2025, 4:29 IST
ರಮೇಶ್
ರಮೇಶ್   

ಚಿಕ್ಕಮಗಳೂರು: ಲಯನ್ಸ್‌ ಸಂಸ್ಥೆ, ಕಲ್ಕಟ್ಟೆ ಪುಸ್ತಕದ ಮನೆ, ಪೂರ್ವಿ ಸುಗಮ ಸಂಗೀತ ಟ್ರಸ್ಟ್‌ ಸಹಯೋಗದಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ‘ಕನ್ನಡ ವೀಣಾ’ ಎಂಬ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಲಯನ್ಸ್ ಸಂಸ್ಥೆ ಸಂಯೋಜಕ ರಮೇಶ್ ತಿಳಿಸಿದರು.

ನಗರದ ಮಧುವನ ಲೇಔಟ್‌ನಲ್ಲಿ ಇರುವ ಎಂಎಲ್‌ಆರ್ ಲಯನ್ಸ್ ಸೇವಾ ಭವನದಲ್ಲಿ ನ. 10ರಂದು ಸಂಜೆ 6ಗಂಟೆಗೆ ನಡೆಯಲಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ವೀಣಾ ವಿದುಷಿ ರೇವತಿ ಕಾಮತ್ ಅವರಿಂದ ವೀಣಾ ವಾದನ ಕಾರ್ಯಕ್ರಮ ಏರ್ಪಡಿಸಲಾಗಿದೆ. ಪಿಟೀಲಿನಲ್ಲಿ ಶಿವಮೊಗ್ಗದ ಎಂ.ಇ. ನಟರಾಜ್, ಮೃದಂಗದಲ್ಲಿ ಶ್ರೀನಿಧಿ ಕೊಪ್ಪ ಹಾಗೂ ರಿದಂ ಪ್ಯಾಡ್‌ನಲ್ಲಿ ಶಿವಮೊಗ್ಗದ ರಾಘವೇಂದ್ರ ರಂಗಧೋಳ್ ಸಹಕರಿಸಲಿದ್ದಾರೆ ಎಂದರು.

ADVERTISEMENT

ಶಾಸಕ ಎಚ್.ಡಿ. ತಮ್ಮಯ್ಯ ಉದ್ಘಾಟಿಸಲಿದ್ದು, ಲಯನ್ ಸಂಸ್ಥೆ ಅಧ್ಯಕ್ಷ ಸಿ.ಎನ್. ಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ಮಕ್ಕಳ ತಜ್ಞ ಡಾ. ಜೆ.ಪಿ. ಕೃಷ್ಣಗೌಡ, ಕಲ್ಕಟ್ಟೆ ಪುಸ್ತಕದ ಮನೆಯ ಅಧ್ಯಕ್ಷೆ ರೇಖಾ ನಾಗರಾಜರಾವ್, ಪೂರ್ವಿ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್ ಅಧ್ಯಕ್ಷ ಎಂ.ಎಸ್. ಸುಧೀರ್, ಲಯನ್ಸ್‌ ಸಂಸ್ಥೆಯ ಪ್ರಾಂತೀಯ ಅಧ್ಯಕ್ಷ ಬಿ.ಎನ್. ವೆಂಕಟೇಶ್, ಸಾಮಾಜಿಕ ಅರಣ್ಯ ವಿಭಾಗದ ಉಪಅರಣ್ಯ ಸಂರಕ್ಷಣಾಧಿಕಾರಿ ಕೆ.ಸಿ. ಆನಂದ್, ಸಾಮಾಜಿಕ ಅರಣ್ಯ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಚರಣಕುಮಾ‌ರ್ ‍ಪಾಲ್ಗೊಳ್ಳುವರು ಎಂದು ವಿವರಿಸಿದರು.

ಲಯನ್ಸ್ ಸಂಸ್ಥೆ ಅಧ್ಯಕ್ಷ ಕುಮಾರ್, ಉಪಾಧ್ಯಕ್ಷ ಟಿ. ನಾರಾಯಣಸ್ವಾಮಿ, ಪ್ರಾಂತೀಯ ಅಧ್ಯಕ್ಷ ವೆಂಕಟೇಶ್, ಶಿವಣ್ಣ, ಗಣೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.