ADVERTISEMENT

ಕೊಟ್ಟಿಗೆಹಾರ | ಕಾಡು ಹಂದಿ ಹಾವಳಿ: ಅಡಿಕೆ ಬೆಳೆ ನಾಶ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2024, 15:59 IST
Last Updated 14 ಏಪ್ರಿಲ್ 2024, 15:59 IST
ಮರ್ಕಲ್ ನಲ್ಲಿ ಕಾಡು ಹಂದಿಗಳು ಅಡಿಕೆ ಗಿಡಗಳು ತುಂಡು ಮಾಡಿ ಬೆಳೆ ನಾಶ ಮಾಡಿರುವುದು.
ಮರ್ಕಲ್ ನಲ್ಲಿ ಕಾಡು ಹಂದಿಗಳು ಅಡಿಕೆ ಗಿಡಗಳು ತುಂಡು ಮಾಡಿ ಬೆಳೆ ನಾಶ ಮಾಡಿರುವುದು.   

ಕೊಟ್ಟಿಗೆಹಾರ: ಬಾಳೂರು ಹೋಬಳಿಯ ಮರ್ಕಲ್‌ನಲ್ಲಿ ಕಾಡು ಹಂದಿಗಳ ಹಾವಳಿ ಹೆಚ್ಚಿದ್ದು, ಅಡಿಕೆ ಸಸಿ ಮತ್ತು ಬಾಳೆ ಗಿಡಗಳನ್ನು ನಾಶಪಡಿಸಿದೆ.  ಮರ್ಕಲ್ ಸೋಮೇಶ್ ಹಾಗೂ ಅರುಣ್ ಎಂಬುವರ 50ಕ್ಕೂ ಹೆಚ್ಚು ಅಡಿಕೆ ಸಸಿಗಳು ಕಾಡುಹಂದಿ ದಾಳಿಗೆ ನಾಶವಾಗಿವೆ.

ಸೋಮೇಶ್ ಮರ್ಕಲ್ ಮಾತನಾಡಿ ‘ಮೂರು ವರ್ಷಗಳಿಂದ ಮಕ್ಕಳಂತೆ ಬೆಳೆಸಿರುವ ಅಡಿಕೆ ಗಿಡಗಳು ಕಾಡು ಹಂದಿ ಹಾವಳಿಯಿಂದ ನಾಶವಾಗಿವೆ. ಚುನಾವಣಾ ನೀತಿ ಸಂಹಿತೆ ಕಾರಣ, ಬೆಳೆ ರಕ್ಷಣೆ  ಕೊಟ್ಟಿರುವ ಬಂದೂಕು ಠಾಣೆಯಲ್ಲಿ ಇರಿಸಿದ್ದು,  ಬಂದೂಕು ಇಲ್ಲದ ಕಾರಣ ಕಾಡು ಹಂದಿಗಳಿಂದ ಬೆಳೆಗಳ ರಕ್ಷಣೆ ಅಸಾಧ್ಯವಾಗಿದೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT