ನರಸಿಂಹರಾಜಪುರ: ಬಾಳೆ ಗ್ರಾ.ಪಂ. ವ್ಯಾಪ್ತಿಯ ಚಿನ್ನಕೂಡಿಗೆ ಗ್ರಾಮದಲ್ಲಿ ಸೋಮವಾರ ಬೆಳಿಗ್ಗೆ ತೋಟಕ್ಕೆ ನುಗ್ಗಿದ ಕಾಡಾನೆ ಅಡಿಕೆ, ಬಾಳೆ ಬೆಳೆಯನ್ನು ನಾಶ ಪಡಿಸಿದೆ.
ಚಿನ್ನಕೂಡಿಗೆ ಗ್ರಾಮದ ಯಶೋದಮ್ಮ ಎಂಬುವರ ತೋಟಕ್ಕೆ ನುಗ್ಗಿದ ಕಾಡಾನೆ ಫಸಲು ಬಿಡುತ್ತಿದ್ದ 15 ವರ್ಷದ 40 ಅಡಿಕೆ ಮರಗಳನ್ನು ಧರೆಗುರುಳಿಸಿ, ಬಾಳೆ ಬೆಳೆಯನ್ನು ನಾಶ ಮಾಡಿದೆ.
ಕಾಡಾನೆಯ ಹಾವಳಿ ತಡೆಗಟ್ಟಿ ರೈತರಿಗಾಗುತ್ತಿರುವ ತೊಂದರೆ ತಪ್ಪಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.