ADVERTISEMENT

ಚಿಕ್ಕಮಗಳೂರು: ಕಲ್ಲಹಳ್ಳಿ ಗುಡ್ಡಕ್ಕೆ ಬೆಂಕಿ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2020, 16:12 IST
Last Updated 2 ಏಪ್ರಿಲ್ 2020, 16:12 IST
ಅಜ್ಜಂಪುರ ತಾಲ್ಲೂಕಿನ ಚೌಳಹಿರಿಯೂರು ಹೋಬಳಿಯ ಕಲ್ಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಲಹಳ್ಳಿ ಗುಡ್ಡದ ಮರಗಿಡಗಳಿಗೆ ಗುರುವಾರ ರಾತ್ರಿ ಬೆಂಕಿಗೆ ತಗುಲಿದೆ.
ಅಜ್ಜಂಪುರ ತಾಲ್ಲೂಕಿನ ಚೌಳಹಿರಿಯೂರು ಹೋಬಳಿಯ ಕಲ್ಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಲಹಳ್ಳಿ ಗುಡ್ಡದ ಮರಗಿಡಗಳಿಗೆ ಗುರುವಾರ ರಾತ್ರಿ ಬೆಂಕಿಗೆ ತಗುಲಿದೆ.   

ಅಜ್ಜಂಪುರ: ತಾಲ್ಲೂಕಿನ ಚೌಳಹಿರಿಯೂರು ಹೋಬಳಿಯ ಕಲ್ಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಲಹಳ್ಳಿ ಗುಡ್ಡದ ಮರಗಿಡಗಳಿಗೆ ಗುರುವಾರ ರಾತ್ರಿ ಬೆಂಕಿ ಬಿದ್ದಿದೆ.

ಗುಡ್ಡಭಾಗದಲ್ಲಿದ್ದ ಅರಣ್ಯ ಇಲಾಖೆಗೆ ಒಳಪಟ್ಟ ಹಲವಾರು ಮರ- ಗಿಡಗಳು ಬೆಂಕಿಗೆ ಆಹುತಿ ಆಗಿವೆ. ಇದಕ್ಕೆ ಹೊಂದಿಕೊಂಡಿದ್ದ ಲಂಬಾಣಿ ತಾಂಡ್ಯದ ಸಾಕಮ್ಮ ಪುಟ್ಟಾನಾಯ್ಕ ಅವರಿಗೆ ಸೇರಿದ 12 ತೆಂಗಿನ ಮರಗಳು ಸುಟ್ಟುಹೋಗಿದೆ.

‘ಸ್ಥಳಕ್ಕೆ ಕಡೂರು ಅಗ್ನಿಶಾಮಕ ದಳ ಭೇಟಿ ನೀಡಿ, ಬೆಂಕಿ ನಂದಿಸುವ ಕಾರ್ಯ ಕೈಗೊಂಡಿದೆ. ಗಾಳಿ ಪ್ರಮಾಣ ಹೆಚ್ಚಿರುವುದು ಬೆಂಕಿಯ ತೀವ್ರತೆ ಅಧಿಕಗೊಳಿಸಿದೆ. ಹೀಗಾಗಿ, ಬೆಂಕಿ ನಂದಿಸುವ ಕಾರ್ಯಕ್ಕೆ ಹಿನ್ನಡೆ ಉಂಟು ಮಾಡಿದೆ’ ಎಂದು ಸ್ಥಳದಲ್ಲಿದ್ದ ಚೇತನ್ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.