ನರಸಿಂಹರಾಜಪುರ: ವನ್ಯ ಪ್ರಾಣಿಗಳು ಹತ್ತಿರ ಬಂದಾಗ ಜೋರಾಗಿ ಶಬ್ದ ಮಾಡುವ ಸೌರಶಕ್ತಿ ಚಾಲಿತ ಯಂತ್ರವನ್ನು ಅರಣ್ಯ ಇಲಾಖೆ ತಾಲ್ಲೂಕಿನ ವ್ಯಾಪ್ತಿಯಲ್ಲಿ ಅಳವಡಿಸಿದೆ.
ಆನೆ–ಮಾನವ ಸಂಘರ್ಷ ತಡೆಯುವ ನಿಟ್ಟಿನಲ್ಲಿ ಈ ಯಂತ್ರವನ್ನು ಅಳವಡಿಸಲಾಗಿದೆ. ತಾಲ್ಲೂಕಿನ ಕಡಹಿನಬೈಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆನೆ ಹಾವಳಿ ಹೆಚ್ಚಿರುವ ಜೇನುಕಟ್ಟೆಸರ ಗ್ರಾಮದಲ್ಲಿ ಮರವೊಂದರ ಮೇಲೆ ತಾತ್ಕಾಲಿಕವಾಗಿ ಈ ಯಂತ್ರವನ್ನು ಅಳವಡಿಸಲಾಗಿದೆ.
‘ಮುಂದಿನ ದಿನಗಳಲ್ಲಿ ಈ ಯಂತ್ರವನ್ನು ಕಬ್ಬಿಣದ ಕಂಬದ ಮೇಲೆ ಶಾಶ್ವತವಾಗಿ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು. ಯಾವ ಗ್ರಾಮಗಳ ವ್ಯಾಪ್ತಿಯಲ್ಲಿ ಆನೆ ಹಾವಳಿ ಹೆಚ್ಚಾಗಿದೆ ಆ ಗ್ರಾಮಗಳ ರಸ್ತೆ ಬದಿಯಲ್ಲಿ ಜಂಗಲ್ ಕ್ಲಿಯರೆನ್ಸ್ ಮಾಡಲಾಗಿದ್ದು, ಬೆಂಕಿರೇಖೆ ನಿರ್ಮಿಸಲಾಗಿದೆ. ಹಾಗಾಗಿ ಆನೆಗಳು ರಸ್ತೆ ಬದಿಯಲ್ಲಿ ನಿಂತರೂ ದೂರದಿಂದಲೇ ಕಾಣಿಸುತ್ತದೆ. ಈ ಯಂತ್ರದಿಂದ ಆನೆಗಳ ಚಲನವಲನದ ಮೇಲೆ ನಿಗಾ ವಹಿಸಲು, ಮುನ್ನೆಚ್ಚರಿಕೆ ವಹಿಸಲು ಸಾಧ್ಯವಾಗುತ್ತದೆ ಎಂದು ವಲಯ ಅರಣ್ಯಾಧಿಕಾರಿ ಪ್ರವೀಣ್ ಕುಮಾರ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.