ADVERTISEMENT

ಆಸ್ಟ್ರೇಲಿಯಾದಿಂದ ಬಂದಿದ್ದ ಚಿಕ್ಕಮಗಳೂರಿನ ಮಹಿಳೆ ಸಾವು

ವಾಂತಿ–ಭೇದಿಯಿಂದ ಬಳಲಿಕೆ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2020, 16:00 IST
Last Updated 26 ಮಾರ್ಚ್ 2020, 16:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಿಕ್ಕಮಗಳೂರು: ಆಸ್ಟ್ರೇಲಿಯಾದಿಂದ ಬಂದಿದ್ದ ಮಹಿಳೆಗೆ ಗುರುವಾರ ವಾಂತಿಭೇದಿ ಕಾಣಿಸಿಕೊಂಡು ನಗರದ ಖಾಸಗಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಕರೆದೊಯ್ಯುವಾಗ ಮೃತಪಟ್ಟಿದ್ದಾರೆ.

ಮಹಿಳೆ ಖಾಸಗಿ ಆಸ್ಪತ್ರೆಗೆ ಗುರುವಾರ ಬೆಳಿಗ್ಗೆ ಬಂದಿದ್ದಾರೆ. ವೈದ್ಯರು ಪರೀಕ್ಷಿಸಿ ಬೆಂಗಳೂರಿಗೆ ಒಯ್ಯಲು ಸೂಚಿಸಿದ್ದಾರೆ.

ಈ ಮಹಿಳೆ ಇದೇ 1ರಂದು ಆಸ್ಟ್ರೇಲಿಯಾದಿಂದ ಬಂದಿದ್ದರು. ಮಹಿಳೆಗೆ ಮಧುಮೇಹ ತೀವ್ರ ಇತ್ತು. ಕೊರೊನಾ ನಿಗಾ ಪಟ್ಟಿಯಲ್ಲಿ ಮಹಿಳೆ ಹೆಸರು ಇರಲಿಲ್ಲ ಎಂದು ಮೂಲಗಳು ತಿಳಿಸಿವೆ.

ADVERTISEMENT

ಗಂಟಲಿನ ದ್ರವ ಪರೀಕ್ಷೆಗೆ ರವಾನೆ

ಕೊರೊನಾ ಪರಿವೀಕ್ಷಣೆ ಪಟ್ಟಿಯಲ್ಲಿ ಮಹಿಳೆ ಹೆಸರು ಇರಲಿಲ್ಲ. ಉಸಿರಾಟ ಸಮಸ್ಯೆ ಇದೆ ಎಂದು ಖಾಸಗಿ ಆಸ್ಪತ್ರೆ ವೈದ್ಯರು ತಿಳಿಸಿದರು. ಹೀಗಾಗಿ, ಆ ಮಹಿಳೆಯ ಗಂಟಲಿನ ದ್ರವ ಮಾದರಿಯನ್ನು ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.