ADVERTISEMENT

ತರೀಕೆರೆ | ಮಾ.3ಕ್ಕೆ ಯೋಧ ದೀಪಕ್‌ ಸ್ಮಾರಕ ಲೋಕಾರ್ಪಣೆ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2025, 14:01 IST
Last Updated 1 ಮಾರ್ಚ್ 2025, 14:01 IST
₹75 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ವೀರಯೋಧ ದೀಪಕ್ ಸ್ಮಾರಕ
₹75 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ವೀರಯೋಧ ದೀಪಕ್ ಸ್ಮಾರಕ   

ತರೀಕೆರೆ: ಬ್ಲಾಕ್ ಕ್ಯಾಟ್ ಕಮ್ಯಾಂಡೊ ಆಗಿ ಕರ್ತವ್ಯದಲ್ಲಿದ್ದ ಸಂದರ್ಭ ಅಪಘಾತದಿಂದ ನಿಧನರಾಗಿದ್ದ ತಣಿಗೆಬೈಲು ಗ್ರಾಮದ ಯೋಧ ಕೆ. ದೀಪಕ್ ಅವರ ಸ್ಮರಣಾರ್ಥ ₹75 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಸ್ಮಾರಕ ಭವನದ ಉದ್ಘಾಟನೆ ಇದೇ 3ರಂದು ನಡೆಯಲಿದೆ.

‘ಏಕೈಕ ಮಗನನ್ನು ಆತನ ಇಚ್ಛೆಯಂತೆ ದೇಶಸೇವೆಗೆ ಸಂತೋಷದಿಂದ ಸೇನೆಗೆ ಕಳುಹಿಸಿಕೊಟ್ಟಿದ್ದೆವು. ಬುದ್ದಿವಂತ ಪದವೀಧರನಾಗಿದ್ದ ಆತ ಬಿ.ಎಸ್.ಎಫ್‌.ನಿಂದ ಹಂತ ಹಂತವಾಗಿ ಮೇಲ್ದರ್ಜೆಗೇರಿ ಕಮ್ಯಾಂಡೊ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ. ಅವನ ಸ್ಮರಣಾರ್ಥ ಸ್ಮಾರಕ ನಿರ್ಮಿಸುವ ಕನಸು ಕಂಡು ನಾವೇ ಹಣ ಹೊಂದಿಸಿ ಭವ್ಯ ಸ್ಮಾರಕ ನಿರ್ಮಿಸಿದ್ದೇವೆ’ ಎಂದು ಯೋಧ ದೀಪಕ್‌ ತಂದೆ ಟಿ. ಕೃಷ್ಣಮೂರ್ತಿ (ರಾಜಣ್ಣ), ತಾಯಿ ಎನ್.ಜಿ. ಭುವನೇಶ್ವರಿ ತಿಳಿಸಿದರು.

ಶಾಸಕ ಜಿ.ಎಚ್. ಶ್ರೀನಿವಾಸ್ ಸ್ಮಾರಕ ಭವನದ ಉದ್ಘಾಟನೆ ನೇರವೇರಿಸುವರು. ಜಿಲ್ಲಾಧಿಕಾರಿ ಮೀನಾ ನಾಗರಾಜ್, ಜಿ.ಪಂ. ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಎಸ್. ಕೀರ್ತನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಮ ಅಮಟೆ, ತರೀಕೆರೆ ಉಪ ವಿಭಾಗಾಧೀಕಾರಿ ಕೆ.ಜೆ. ಕಾಂತರಾಜ್, ತಹಶೀಲ್ದಾರ್ ವಿಶ್ವಜೀತ್ ಮೆಹತಾ, ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಆರ್. ದೇವೆಂದ್ರಪ್ಪ, ಜಿಲ್ಲಾ ಮಾಜಿ ಯೋಧರ ಸಂಘದ ಅಧ್ಯಕ್ಷ ಮಂಜುನಾಥ್ ಮತ್ತು ಪದಾಧಿಕಾರಿಗಳು, ತಿಗಡ ಗ್ರಾ.ಪಂ. ಅಧ್ಯಕ್ಷೆ ಶ್ರೀದೇವಿ ಸತೀಶ್, ಉಪಾಧ್ಯಕ್ಷ ಆರ್. ಮುರುಗ, ಕೆ.ಡಿ.ಪಿ. ಸದಸ್ಯೆ ರಚನಾ ಶ್ರೀನಿವಾಸ್, ತಾಲ್ಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಎನ್.ಜಿ. ರಮೇಶ್, ತಾ.ಪಂ. ಮಾಜಿ ಅಧ್ಯಕ್ಷ ಬಿ.ಆರ್. ರವಿ, ಬಗರ್ ಹುಕುಂ ಸಮಿತಿ ಸದಸ್ಯ ಮೊಹಮ್ಮದ್ ಅಕ್ಬರ್ ಭಾಗವಹಿಸುವರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.