ADVERTISEMENT

ಕೊಪ್ಪದಮ್ಮದೇವಿ ಜಾತ್ರೆ: ಕೆಂಡಾರ್ಚನೆ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2012, 5:55 IST
Last Updated 15 ಫೆಬ್ರುವರಿ 2012, 5:55 IST

ಚಿಕ್ಕಜಾಜೂರು: ಇಲ್ಲಿನ ಕೊಪ್ಪದೇವಿ ಜಾತ್ರೆ ಆರಂಭವಾಗಿದೆ. ಸೋಮವಾರ ರಾತ್ರಿ ದೇವಿಗೆ ಮಧುವಣಗಿತ್ತಿ ಶಾಸ್ತ್ರವನ್ನು ಮಾವಿನಕಟ್ಟೆ ಹನುಮಂತಪ್ಪ ಅವರ ಮನೆಯಲ್ಲಿ ಮಾಡಲಾಯಿತು.

ಮಂಗಳವಾರ ಬೆಳಿಗ್ಗೆ 11ಕ್ಕೆ ದೇವಸ್ಥಾನದ ಮುಂಭಾಗದಲ್ಲಿ ಸಿದ್ಧ ಪಡಿಸಲಾಗಿದ್ದ ಅಗ್ನಿ ಕುಂಡದಲ್ಲಿ ದೇವಿಯ ಮಂತ್ರದೊಂದಿಗೆ ಪುರೋಹಿತ ಬಸವರಾಜಯ್ಯನವರು ಅಗ್ನಿ ಕುಂಡದ ಸುತ್ತ ದಿಗ್ಬಂಧನ ಹಾಕಿದರು. ಗುದ್ಲಿ ಪರಮೇಶ್ವರಪ್ಪ ಕುಟುಂಬದಿಂದ ಕುಂಡಕ್ಕೆ ಅನ್ನ ಮತ್ತು ಹಾಲು, ತುಪ್ಪ ಹಾಗೂ ಮೊಸರನ್ನು ಹಾಕಿ ಅನ್ನ ಸೇವೆಯನ್ನು ಮಾಡಿ ಮಹಾಮಂಗಳಾರತಿ ಮಾಡಲಾಯಿತು.

ಬಸವರಾಜಯ್ಯ ಅವರ ಆದೇಶದಂತೆ ಪೂಜಾರಿ ಆಂಜಿನಪ್ಪ ದೇವಿಯ ಉತ್ಸವ ಮೂರ್ತಿಯನ್ನು ಒತ್ತು ಅಗ್ನಿ ಕುಂಡವನ್ನು ಪ್ರವೇಶಿಸಿದರು. ಈ ದೃಶ್ಯವನ್ನು ನೆರದಿದ್ದ ನೂರಾರು ಭಕ್ತರು ಭಕ್ತಿಯಿಂದ ನೋಡಿ ಪುನೀತರಾಗಿ ನಮನ ಸಲ್ಲಿಸಿದರು.

ನಂತರ ದೇವಿಯ ಉತ್ಸವ ಮೂರ್ತಿಯನ್ನು ಅಲಂಕಾರಗೊಂಡ ಟ್ರ್ಯಾಕ್ಟರ್‌ನಲ್ಲಿ ಕೂರಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಅದ್ದೂರಿ ಮೆರವಣಿಗೆ ನಡೆಸಲಾಯಿತು. ಗ್ರಾಮದ ಭಕ್ತರು ತಾವು ಮನೆಯಲ್ಲಿ ಮಾಡಿದ್ದ ವಿವಿಧ ಬಗೆಯ ಅಡುಗೆಯನ್ನು ದೇವಸ್ಥಾನಕ್ಕೆ ತಂದು ಎಡೆ ಮಾಡಿಸಿಕೊಂಡು ಹೋಗುತ್ತಿದ್ದರು.

ರಾತ್ರಿ 11ಕ್ಕೆ ಹರಿಜನರಿಂದ ದೇವಿಯ ಸೇವೆ ಹಾಗೂ ವಿಶೇಷ ಪೂಜೆ ನಡೆಯುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.