ADVERTISEMENT

ಗುಣಮಟ್ಟದ ಕಾಮಗಾರಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2012, 6:20 IST
Last Updated 13 ಫೆಬ್ರುವರಿ 2012, 6:20 IST

ನಾಯಕನಹಟ್ಟಿ: ಕಾಮಗಾರಿಯಲ್ಲಿ ಉತ್ತಮ ಗುಣಮಟ್ಟವನ್ನು ಕಾಪಾಡಬೇಕು ಎಂದು ಶಾಸಕ ಎನ್.ವೈ. ಗೋಪಾಲಕೃಷ್ಣ ಸಲಹೆ ನೀಡಿದರು.

ಇಲ್ಲಿನ ನಾಯಕನಹಟ್ಟಿಯಿಂದ ಮನುಮಯ್ಯನಹಟ್ಟಿವರೆಗೆ ಅಭಿವೃದ್ಧಿ ಪಡಿಸುತ್ತಿರುವ ರಾಜ್ಯಹೆದ್ದಾರಿ 45ರ ಕಾಮಗಾರಿಯನ್ನು ಭಾನುವಾರ ವೀಕ್ಷಿಸಿ ಅವರು ಮಾತನಾಡಿದರು.

ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹೆಚ್ಚಾಗಿ ಪ.ಜಾತಿ, ಪಂಗಡದ ಜನರೇ ಹೆಚ್ಚಾಗಿದ್ದಾರೆ. ಪರಿಶಿಷ್ಟ, ಜಾತಿ ಪಂಗಡ ಯೋಜನೆ ಅಡಿಯಲ್ಲಿ  ಗ್ರಾಮಗಳ ರಸ್ತೆಗಳ ಅಭಿವೃದ್ಧಿಗೆ ್ಙ 1.4 ಕೋಟಿ  ಬಿಡುಗಡೆ ಆಗಿದೆ ಎಂದು ತಿಳಿಸಿದರು.

ಕುದಾಪುರ, ಜಂಬಯ್ಯನಹಟ್ಟಿ, ಗಿಡ್ಡಾಪುರ,  ಕಾಟವ್ವನಹಳ್ಳಿ, ರಾಮದುರ್ಗ ಚಿಕ್ಕಮ್ಮನಹಳ್ಳಿ, ವರವು, ಚನ್ನಬಸಯ್ಯನಹಟ್ಟಿ, ಓಬಯ್ಯನಹಟ್ಟಿ, ಜೋಗಿಹಟ್ಟಿ ಗ್ರಾಮಗಳಲ್ಲಿ ್ಙ 8ರಿಂದ 10 ಲಕ್ಷ ವೆಚ್ಚದಲ್ಲಿ ಬಹುಕಾಲ ಬಾಳಿಕೆ ಬರುವಂತಹ ಸಿಮೆಂಟ್ ರಸ್ತೆಯನ್ನು ನಿರ್ಮಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಅಂತೆಯೇ ಪ್ರಸಿದ್ಧ ಪುಣ್ಯಕ್ಷೇತ್ರವಾದ ನಾಯಕನಹಟ್ಟಿ ಗ್ರಾಮದ ಪ್ರಮುಖ ರಸ್ತೆ ಹಾಳಾಗಿತ್ತು. ಇದಕ್ಕಾಗಿ ಸುಮಾರು ್ಙ 1 ಕೋಟಿ ವೆಚ್ಚದಲ್ಲಿ ರಾಜ್ಯ ಹೆದ್ದಾರಿ 45ರಲ್ಲಿ ನಾಯಕನಹಟ್ಟಿಯ ಚಿಕ್ಕಕೆರೆಯಿಂದ ಮನುಮಯ್ಯನ ಹಟ್ಟಿವರೆಗೆ ರಸ್ತೆ ಅಭಿವೃದ್ಧಿಯನ್ನು ಕೈಗೊಳ್ಳಲಾಗಿದೆ ಎಂದರು.

ಈ ಕಾಮಗಾರಿಯನ್ನು ನಾಯಕನಹಟ್ಟಿ ಜಾತ್ರೆಯೊಳಗಾಗಿ ಪೂರೈಸಲಾಗುವುದು. ಗುರು ತಿಪ್ಪೇರುದ್ರಸ್ವಾಮಿ ಜಾತ್ರೆಗೆ ರಾಜ್ಯ ಹೊರ ರಾಜ್ಯಗಳಿಂದ ಲಕ್ಷಾಂತರ ಭಕ್ತರು ಗ್ರಾಮಕ್ಕೆ ಆಗಮಿಸುವುದರಿಂದ ಸಂಚಾರಕ್ಕೆ ಸುಗಮವಾದ ರಸ್ತೆಯನ್ನು ನಿರ್ಮಿಸಲಾಗುವುದು. ಬೇಗ ಕಾಮಗಾರಿಯನ್ನು ಮುಗಿಸಲು ಲೋಕೋಪಯೋಗಿ ಇಲಾಖೆಗೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ತಿಪ್ಪೇಸ್ವಾಮಿ ರೆಡ್ಡಿ, ತಾ.ಪಂ. ಉಪಾಧ್ಯಕ್ಷ ತಿಪ್ಪೇಶ್‌ಕುಮಾರ, ಎಇಇ ರಾಮಚಂದ್ರಪ್ಪ, ಸೆಕ್ಷನ್‌ಎಂಜಿನಿಯರ್ ರಾಜು, ಗ್ರಾಮ ಪಂಚಾಯ್ತಿ ಸದಸ್ಯ ಮುದಿಯಪ್ಪ ಮತ್ತು ಸೂರನಾಯಕ,  ಜಿ. ತಿಪ್ಪೇಸ್ವಾಮಿ ಹಾಜರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.