ಚಿತ್ರದುರ್ಗ: ದೀನರು, ದುರ್ಬಲರು, ಅಂಗವಿಕಲರುಗಳಲ್ಲಿ ದೇವರನ್ನು ಕಾಣುವ ಪ್ರವೃತ್ತಿ ಬೆಳಸಿಕೊಳ್ಳಬೇಕು ಎಂದು ಖ್ಯಾತ ಪ್ರವಚನಕಾರರೂ, ಹಾಸ್ಯ ಕಲಾವಿದರಾದ ಇಂದುಮತಿ ಸಾಲಿಮಠ ನೀಡಿದರು.
ಬಸವಕೇಂದ್ರ, ಮುರುಘಾಮಠದ ವತಿಯಿಂದ ಶರಣಸಂಸ್ಕತಿ ಉತ್ಸವ 2011ರ ಅಂಗವಾಗಿ ಮುರುಘಾಮಠದಲ್ಲಿ ಆಯೋಜಿಸಿದ್ದ ವಿಶೇಷ ಪ್ರವಚನ ಮಾಲೆಯಲ್ಲಿ ಅವರು ಮಾತನಾಡಿದರು.
ದೇವರು ದಯಾಮಯ. ಅವನು ಕಣ್ಣಿಗೆ ಕಾಣದವ. ದೀನ ದಲಿತರ ಏಳ್ಗೆಗೆ ಸೇವೆ ಸಲ್ಲಿಸಿದರೆ ಅದುವೇ ದೇವಪೂಜೆ. ಆ ನಿಟ್ಟಿನಲ್ಲಿ ನಾವಿಂದು ಸಾಗಬೇಕಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಿವಮೂರ್ತಿ ಮುರುಘಾ ಶರಣರು ಮಾತನಾಡಿ, ಎಲ್ಲ ರೋಗಗಳಿಗೆ ಮೂಲ ಮದ್ದು ಶಿವಯೋಗದಲ್ಲಿದೆ. ಅದು ಹೀಗೆ ಪ್ರವಚನಕ್ಕೆ ಬರುವ ಕೇಳುವ ರೂಢಿ ಯಿಂದ ತಾನಾಗಿಯೇ ಮನುಷ್ಯನಲ್ಲಿರುವ ದುರಾಸೆ ದುರ್ಗುಣಗಳನ್ನು ಕಡಿಮೆ ಮಾಡುತ್ತದೆ. ಆ ನಿಟ್ಟಿನಲ್ಲಿ ಶರಣಸಂಸ್ಕತಿ ಉತ್ಸವಕ್ಕೆ ಪೂರ್ವಭಾವಿಯಾಗಿ ಆಯೋಜಿಸಿರುವ ಈ ವಿಶೇಷ ಪ್ರವಚನಮಾಲೆಗೆ ಜನ ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದಾರೆ.
ಜಮುರಾ ಕಲಾಲೋಕದ ಕಲಾವಿದರು ವಚನ ಪ್ರಾರ್ಥನೆ ಮಾಡಿದರು. ಗಾರೇಹಟ್ಟಿ ಬೃಹನ್ಮಠ ಪ್ರೌಢಶಾಲೆ ಶಿಕ್ಷಕ ಅಶೋಕ್ ಸ್ವಾಗತಿಸಿದರು. ಸಿ.ಎಂ. ಸಾವಿತ್ರಿ ಕಾರ್ಯಕ್ರಮ ನಿರೂಪಿಸಿದರು. ವೇದಮೂರ್ತಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.