ADVERTISEMENT

ನಾಗರಿಕರಿಗೆ ಬಂದೂಕು ತರಬೇತಿ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2011, 8:25 IST
Last Updated 12 ಸೆಪ್ಟೆಂಬರ್ 2011, 8:25 IST

ಚಿತ್ರದುರ್ಗ: ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಚಂದ್ರವಳ್ಳಿ ಗುಡ್ಡದಲ್ಲಿ 95  ನಾಗರಿಕರಿಗೆ ಬಂದೂಕು ತರಬೇತಿ ಭಾನುವಾರ ನೀಡಲಾಯಿತು.

ಈ ತರಬೇತಿಯಲ್ಲಿ ಗುಂಡು ಹೊಡೆಯುವುದು ಹಾಗೂ ಆತ್ಮರಕ್ಷಣೆ, ಮತ್ತು ಸ್ಪರ್ಧಾತ್ಮಕವಾಗಿ ಎದುರಿಸುವ ಬಗ್ಗೆ ಪೋಲಿಸ್ ಅಧಿಕಾರಿಗಳು ಮಾಹಿತಿ ನೀಡಿದರು.

ಬಂದೂಕಿನಲ್ಲಿ ಉತ್ತಮ ಗುರಿ ಹಾಗೂ ಇನ್ನಿತರ ಸ್ಪರ್ಧಾತ್ಮಕ ತರಬೇತಿಗಳಲ್ಲಿ ಉತ್ತಮ ಅಂಕಗಳಿಸಿದವರನ್ನು ರಾಜ್ಯಮಟ್ಟದಲ್ಲಿ ನಡೆಯುವ ಕ್ರೀಡೆಗೆ ಆಯ್ಕೆ ಮಾಡಲಾಯಿತು.

ಬಂದೂಕು ತರಬೇತಿಯಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಡಿವೈಎಸ್ಪಿ ಪಾಪಣ್ಣ, ಸಹಾಯಕ ಅಧಿಕಾರಿಗಳಾದ ಮಲ್ಲಿಕಾರ್ಜುನಚಾರ್, ಪ್ರಕಾಶ್ ಸರ್ದಾರ್, ಮಲ್ಲಿಕಾರ್ಜುನ್ ಅವರು ನಾಗರಿಕರಿಗೆ ಬಂದೂಕು ತರಬೇತಿ ನೀಡಿದರು. ಬಂದೂಕ ನಾಗರಿಕ ಸಂಸ್ಥೆಯ ವೈ.ಬಿ, ಮಹೇಂದ್ರನಾಥ್ ಹಾಗೂ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

14ಕ್ಕೆ ಕವಿ ಜಯಂತ್ಯುತ್ಸವ
ನಗರದಲ್ಲಿ ಸೆ.14ರಿಂದ 18ರವರೆಗೆ ಕವಿ ಜಯಂತ್ಯುತ್ಸವ ಮತ್ತು ದತ್ತಿನಿಧಿ ಕಾರ್ಯಕ್ರಮ ನಡೆಯಲಿದೆ.
ಗಮಕ ಕಲಾಭಿಮಾನಿಗಳ ಸಂಘ, ಕರ್ನಾಟಕ ಗಮಕ ಕಲಾ ಪರಿಷತ್, ಬ್ರಾಹ್ಮಣ ಸಂಘ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ.

ಕನ್ನಡದ ಪ್ರಸಿದ್ಧ ಕವಿಗಳಾದ ಕುಮಾರವ್ಯಾಸ, ಲಕ್ಷ್ಮೀಶ, ರಾಘವಾಂಕ, ತೊರವೆ ನರಹರಿ ಹಾಗೂ ರಾಷ್ಟ್ರಕವಿ ಕುವೆಂಪು ಅವರ ಮಹಾಕಾವ್ಯಗಳ ವಾಚನ- ವಾಖ್ಯಾನ ಈ ಸಂದರ್ಭದಲ್ಲಿ ನಡೆಯಲಿದೆ.

ನಗರದ ಗಾಯತ್ರಿ ವೃತ್ತದಲ್ಲಿನ ಗಾಯತ್ರಿ ಕಲ್ಯಾಣ ಮಂಟಪದ ಶಾರದಾ ಸಭಾಭವನದಲ್ಲಿ ಪ್ರತಿ ದಿನ ಸಂಜೆ 5.45ಕ್ಕೆ ಈ ಕಾರ್ಯಕ್ರಮ ನಡೆಯಲಿದೆ. ಸೆ.17ರಂದು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜಿಸಲಾಗಿದೆ. ಸಾಹಿತ್ಯಾಭಿಮಾನಿಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.