ADVERTISEMENT

ಬೆಳೆ ನಷ್ಟ: ಪರಿಹಾರ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2012, 7:45 IST
Last Updated 5 ನವೆಂಬರ್ 2012, 7:45 IST

ಚಳ್ಳಕೆರೆ: ತಾಲ್ಲೂಕಿನ ಸಣ್ಣ ಮತ್ತು ಅತಿ ಸಣ್ಣ ರೈತ ಕುಟುಂಬಗಳಿಗೆ ಕಳೆದ ಸಾಲಿನ ಬೆಳೆ ನಷ್ಟ ಪರಿಹಾರವನ್ನು ಸರ್ಕಾರ ಬಿಡುಗಡೆ ಮಾಡಿದೆ  ಎಂದು ತಹಶೀಲ್ದಾರ್ ಡಿ.ಕೆ. ರಾಮಚಂದ್ರಪ್ಪ ತಿಳಿಸಿದ್ದಾರೆ.

ಈಚೆಗೆ ತಾಲ್ಲೂಕು ಕಚೇರಿಯಲ್ಲಿ ಮಾತನಾಡಿದ ಅವರು, ತಾಲ್ಲೂಕಿನಲ್ಲಿ ಸುಮಾರು 30,772 ಬಡ ರೈತ ಕುಟುಂಬಗಳನ್ನು ಕೃಷಿ ಇಲಾಖೆ ಹಾಗೂ ಕಂದಾಯ ಇಲಾಖೆ ಸಹಕಾರದಿಂದ  ಆಯ್ಕೆ ಮಾಡಿದ್ದು, ಒಟ್ಟುರೂ 3 ಕೋಟಿ ಹಣವನ್ನು ಬಿಡುಗಡೆ ಮಾಡುವಂತೆ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು.
ಪರಿಶೀಲಿಸಿದ ಸರ್ಕಾರ ಕಳೆದ ತಿಂಗಳು ಒಟ್ಟುರೂ 2.46 ಕೋಟಿ ಬಿಡುಗಡೆ ಮಾಡಿದೆ ಎಂದರು.

ಫಲನುಭವಿಗಳಿಗೆ ಚೆಕನ್ನು ರಜಾ ದಿನ ಸಹ ವಿತರಿಸುವಂತೆ ಸೂಚನೆ ನೀಡಿದ್ದು, ಈಗಾಗಲೇ ಒಂದು ಕೋಟಿಗೂ ಅಧಿಕ ಮೊತ್ತದ ಚೆಕ್ಕನ್ನು ವಿತರಣೆ  ಮಾಡಲಾಗಿದೆ ಎಂದು ತಹಶೀಲ್ದಾರ್ ತಿಳಿಸಿದರು.

ಸರ್ಕಾರ  ಚಳ್ಳಕೆರೆ ತಾಲ್ಲೂಕನ್ನು ಬರಪೀಡಿತ  ಪ್ರದೇಶ ಎಂದು ಘೋಷಿಸಿದ ನಂತರ ಇದೇ ಮೊದಲ ಬಾರಿಗೆ ಹೆಚ್ಚಿನ ಪ್ರಮಾಣದಲ್ಲಿ ಹಣ ಬಿಡುಗಡೆ ಮಾಡಿದೆ. ರೈತರು ಆಯಾ ಗ್ರಾಮಾಧಿಕಾರಿಗಳ ಬಳಿ ಚೆಕ್ ಪಡೆಯುವಂತೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.