ADVERTISEMENT

ಮನ ದೃಢವಾಗಿದ್ದಲ್ಲಿ ಗುರಿ ಸಾಧನೆ ಸಾಧ್ಯ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2011, 9:10 IST
Last Updated 4 ಅಕ್ಟೋಬರ್ 2011, 9:10 IST

ಚಿತ್ರದುರ್ಗ: ಯಾವುದೇ ಸಂದರ್ಭದಲ್ಲಿ ಖಿನ್ನತೆ ಒಳಗಾಗದೇ ಮನಸ್ಥಿತಿ ದೃಢವಾಗಿದ್ದರೆ ಮಾತ್ರ ಗುರಿ ಸಾಧಿಸಲು ಪೂರಕವಾಗುತ್ತದೆ ಎಂದು ಶಿವಮೂರ್ತಿ ಮುರುಘಾ ಶರಣರು ಅಭಿಪ್ರಾಯ ಪಟ್ಟರು.ಮುರುಘಾಮಠದ ಅಲ್ಲಮಪ್ರಭು ಮಂಟಪ ಶರಣ ಮಾದರ ಚನ್ನಯ್ಯ ವೇದಿಕೆಯಲ್ಲಿ ಸೋಮವಾರ ಸಹಜ ಶಿವಯೋಗ ಕಾರ್ಯಕ್ರಮ ನೆರವೇರಿಸಿ ಮಾತಾನಾಡಿದ ಅವರು, ದಿನನಿತ್ಯದ ಬದುಕಿನಲ್ಲಿ ಖಿನ್ನರಾಗಬಾರದು ಎಂದರು.

ಮರೆವಿನ ಜಾಗದಲ್ಲಿ ಅರಿವಿನ ಸ್ಥಾನ ಬಹಳ ಮುಖ್ಯ. ಜೀವನದಲ್ಲಿ ಅರಿವಿಗೆ ಉನ್ನತ ಸ್ಥಾನ ಕೊಡಬೇಕು. ಶಿವಯೋಗದ ಧ್ಯಾನದಿಂದ ಅರಿವಿನ ವೃದ್ಧಿಯಾಗಲು ಸಹಾಯವಾಗುತ್ತದೆ. ಅರಿವಿನಿಂದ ಜಗತ್ತಿನಲ್ಲಿ ಏನಾನ್ನಾದರೂ ಸಾಧಿಸಬಹುದು.  ಯಾರೂ ಹಿಂದಿನ ತಲೆಮಾರಿನ ಆಸ್ತಿಯನ್ನು ನಂಬಿ ಜೀವನ ಮಾಡಬಾರದು.  ಎಲ್ಲರೂ ತಮ್ಮ ತಮ್ಮ ಕೊಡುಗೆಯನ್ನು ಸಮಾಜಕ್ಕೆ ಸಲ್ಲಿಸುವುದು ಸೂಕ್ತ ಎಂದರು.

ತಾವು ಸಹ ಯಾವುದೇ ಆಸ್ತಿಗೆ ಅವಲಂಬಿಸದೆ ತಮ್ಮದೇ ಆದ ಹೊಸ ಹೊಸ ಕೊಡುಗೆ ಮಠಕ್ಕೆ ಒದಗಿಸುವ ಮೂಲಕ ಮಠದ ಅಭಿವೃದ್ದಿಗೆ ಶ್ರಮಿಸುತ್ತಿರುವುದಾಗಿ ಪ್ರತಿಪಾದಿಸಿದರು. ಬಸವಕುಮಾರ ಸ್ವಾಮೀಜಿ ಮಾತನಾಡಿ, ಅಂತರಂಗದ ಕಲ್ಮಶಗಳನ್ನು ಹೋಗಲಾಡಿಸಲು ಸಹಜ ಶಿವಯೋಗ ಆವಶ್ಯವೆಂದು ತಿಳಿಸಿದರು

ಸಹಜ ಶಿವಯೋಗದಲ್ಲಿ ಅನ್ನದಾನ ಭಾರತಿ ಅಪ್ಪಣ್ಣಸ್ವಾಮಿ, ಕಿರಣ್ ಕುಮಾರ್ ಖಂಡ್ರೆ, ಸತ್ಯಗೌಡ ನಿಂಗನಗೌಡ ನ್ಯಾಮಗೌಡ, ಶಾಸಕ ವಿ.ಎಸ್. ಪಾಟೀಲ್ ಮತ್ತಿತರರು  ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.