ADVERTISEMENT

ರೂ. 20 ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ

ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಶಂಕುಸ್ಥಾಪನೆ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2014, 5:42 IST
Last Updated 27 ಫೆಬ್ರುವರಿ 2014, 5:42 IST
ಚಿತ್ರದುರ್ಗ ತಾಲ್ಲೂಕಿನಲ್ಲಿ ಬುಧವಾರ ₨ 20 ಕೋಟಿ ವೆಚ್ಚದ ವಿವಿಧ ಕಾಮಗಾರಿಗೆ ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ  ಶಂಕುಸ್ಥಾಪನೆ ನೆರವೇರಿಸಿದರು.
ಚಿತ್ರದುರ್ಗ ತಾಲ್ಲೂಕಿನಲ್ಲಿ ಬುಧವಾರ ₨ 20 ಕೋಟಿ ವೆಚ್ಚದ ವಿವಿಧ ಕಾಮಗಾರಿಗೆ ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಶಂಕುಸ್ಥಾಪನೆ ನೆರವೇರಿಸಿದರು.   

ಚಿತ್ರದುರ್ಗ: ಚಿತ್ರದುರ್ಗ ಕ್ಷೇತ್ರದ ವಿವಿಧ ಭಾಗಗಳಲ್ಲಿ ಶಾಸಕರ ನಿಧಿ, ವಿಶೇಷ ಘಟಕ, ಗಿರಿಜನ ಉಪಯೋಜನೆ, ಪ್ರಕೃತಿ ವಿಕೋಪ ನಿಧಿ, ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ₨ ೨೦ ಕೋಟಿಗಿಂತಲೂ ಹೆಚ್ಚಿನ ಮೊತ್ತದ ಕಾಮಗಾರಿಗಳಿಗೆ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಬುಧವಾರ ಶಂಕುಸ್ಥಾಪನೆ ನೆರವೇರಿಸಿದರು.

ಕ್ಯಾದಿಗೆರೆಯಿಂದ ದೊಡ್ಡಸಿದ್ದವ್ವನ ಹಳ್ಳಿ ರಸ್ತೆ ಅಭಿವೃದ್ಧಿಗೆ ಪ್ರಕೃತಿ ವಿಕೋಪ ನಿಧಿಯಡಿ ₨ ೧.೮೨ ಕೋಟಿ, ಬೀರಾವರದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಕಾಲೊನಿಯಲ್ಲಿ ಸಿ.ಸಿ. ರಸ್ತೆಗೆ ₨ ೨೧ ಲಕ್ಷ, ಶಾಸಕರ ನಿಧಿಯಡಿ ಸಮುದಾಯ ಭವನ ₨ ೨ ಲಕ್ಷ, ಕೆ.ಬಳ್ಳೆಕಟ್ಟೆಯಲ್ಲಿ ಪರಿಶಿಷ್ಟ ಕಾಲೊನಿಯ ಸಿ.ಸಿ. ರಸ್ತೆಗೆ ₨ ೮ ಲಕ್ಷ, ರಾಷ್ಟ್ರೀಯ ಹೆದ್ದಾರಿಯಿಂದ ಕೆ. ಬಳ್ಳೇಕಟ್ಟೆಯಿಂದ ನೀಲಯ್ಯನಹಟ್ಟಿ, ಕ್ಯಾಸಾಪುರದವರೆಗೆ ಪಿಎಂಜಿಎಸ್‌ವೈ ಯೋಜನೆಯಡಿ ರಸ್ತೆಗಾಗಿ
₨ ೩.೧೨ ಕೋಟಿ ಬಿಡುಗಡೆ ಮಾಡಲಾಗಿದೆ.

ಸಾದರಹಳ್ಳಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಕಾಲೊನಿಯಲ್ಲಿ ಸಿ.ಸಿ. ರಸ್ತೆಗೆ ₨ ೧೫ ಲಕ್ಷ, ಕ್ಯಾಸಾಪುರದಲ್ಲಿ ಶಾಸಕರ ನಿಧಿಯಡಿ ಸಮುದಾಯಭವನಕ್ಕೆ ₨ ೭ ಲಕ್ಷ, ಪರಿಶಿಷ್ಟ ಜಾತಿ ಕಾಲೋನಿಯಲ್ಲಿ ಸಿ.ಸಿ. ರಸ್ತೆಗೆ ₨ ೨೦ ಲಕ್ಷ, ಚಿಕ್ಕಪುರದಲ್ಲಿ ಪರಿಶಿಷ್ಟ ಪಂಗಡದ ಕಾಲೊನಿಯಲ್ಲಿ ಸಿ.ಸಿ.ರಸ್ತೆಗೆ ₨ ೬ ಲಕ್ಷ, ಮಾರಘಟ್ಟದಲ್ಲಿ ಸಿ.ಸಿ. ರಸ್ತೆಗೆ ₨ ೬ ಲಕ್ಷ, ಲಕ್ಷ್ಮೀಸಾಗರ ದಲ್ಲಿ ಸಿ.ಸಿ. ರಸ್ತೆಗೆ ₨ ೨೮.೮೨ ಲಕ್ಷ, ವಿಜಾಪುರದ ಕಾಲೊನಿಯಲ್ಲಿ ಸಿ.ಸಿ. ರಸ್ತೆ ೭ ಹಾಗೂ ಶಾಸಕರ ನಿಧಿಯಡಿ ಸಮುದಾಯ ಭವನ ₨  ೫ ಲಕ್ಷ, ಓಬವ್ವ ನಾಗತೀಹಳ್ಳಿಯಿಂದ ಗೊಲ್ಲರಹಟ್ಟಿ, ದೊಡ್ಡಾಲಘಟ್ಟದವರೆಗೆ ₨ ೨.೩೫ ಕೋಟಿಯಲ್ಲಿ ಪಿಎಂಜಿಎಸ್‌ವೈ ಯೋಜನೆ ಅಡಿ ರಸ್ತೆ ಅಭಿವೃದ್ಧಿ ಪಡಿಸಲು ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ತಿಪ್ಪಾರೆಡ್ಡಿ ತಿಳಿಸಿದರು.

ಓಬವ್ವನಾಗತೀಹಳ್ಳಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಕಾಲೊನಿಯಲ್ಲಿ ₨ ೨೩ ಲಕ್ಷದಲ್ಲಿ ಸಿ.ಸಿ.ರಸ್ತೆ, ದೊಡ್ಡಾಲಘಟ್ಟ, ಚಿಕ್ಕಾಲ ಘಟ್ಟ, ಹುಣಸೇಕಟ್ಟೆ, ಕಡ್ಲೆಗುದ್ದು, ಹಿರೇಗುಂಟನೂರು, ಹಳಿಯೂರು, ಕುರುಬರಹಳ್ಳಿ, ಬೆನಕನಹಳ್ಳಿ, ಹುಲ್ಲೂರು, ಹುಲ್ಲೂರುನಾಯಕರಹಟ್ಟಿ ಹಾಗೂ ಸಿಂಗಾಪುರದಲ್ಲಿ ಪರಿಶಿಷ್ಟ ಪಂಗಡದ ಕಾಲೊನಿಗಳಲ್ಲಿ ಸಿ.ಸಿ. ರಸ್ತೆ ಹಾಗೂ ಶಾಸಕರ ನಿಧಿಯಡಿ ಸಮುದಾಯ ಭವನ ನಿರ್ಮಾಣ ಮಾಡಲು ₨೧.೯೯ ಕೋಟಿ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.

ಅಲ್ಲದೆ ರಾಷ್ಟ್ರೀಯ ಹೆದ್ದಾರಿಯಿಂದ ಮೆದೇಹಳ್ಳಿ ರಸ್ತೆ ಅಭಿವೃದ್ದಿಗೆ ಸಿಅರ್‌ಎಫ್‌ನಡಿ ₨ ೪.೭೦ ಕೋಟಿ, ಲೋಕೋಪಯೋಗಿ ಇಲಾಖೆಯಿಂದ ಪಂಡರಹಳ್ಳಿಯಿಂದ ಬೆಟ್ಟದನಾಗೇನ ಹಳ್ಳಿವರೆಗಿನ ರಸ್ತೆಗೆ ₨ ೩ ಕೋಟಿ, ಚಿಕ್ಕಾಲಘಟ್ಟದಿಂದ ಹುಣಸೇ ಕಟ್ಟೆ ರಸ್ತೆ ₨ ೨ ಕೋಟಿ, ಕೊಡಗವಳ್ಳಿಯಿಂದ ಕಡ್ಲೆಗುದ್ದು ರಸ್ತೆ ₨ ೨.೫ ಕೋಟಿ ಹಾಗೂ ನೀರಾವರಿ ಇಲಾಖೆಯಿಂದ ಚಳ್ಳಕೆರೆ ರಸ್ತೆಯಿಂದ ಹಳೇದ್ಯಾಮವ್ವನ ಹಳ್ಳಿಯವರೆಗೆ ರಸ್ತೆ ನಿರ್ಮಾಣಕ್ಕೆ ₨ ೧ ಕೋಟಿ, ಕುರುಮರಡಿಯಿಂದ ಓಬೇನಹಳ್ಳಿವರೆಗೆ ₨ ೧ ಕೋಟಿಯಡಿ ರಸ್ತೆ ನಿರ್ಮಾಣಕ್ಕೆ ಮಂಜೂರಾತಿ ದೊರಕಿದ್ದು ಅತಿ ಶೀಘ್ರವಾಗಿ ಕಾಮಗಾರಿ ಪ್ರಾರಂಭಿಸಲಾಗುತ್ತದೆ ಎಂದು ಶಾಸಕರು ತಿಳಿಸಿದರು.

ಪಿಎಂಜಿಎಸ್‌ವೈ ಯೋಜನೆ ಕಾರ್ಯಪಾಲಕ ಎಂಜಿನಿಯರ್ ಮಂಜುನಾಥ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರಂಗನಾಥ್, ಎಂಜಿನಿಯರ್ ಕೃಷ್ಣಪ್ಪ, ಗ್ರಾ.ಪಂ. ಸದಸ್ಯರು ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.