ADVERTISEMENT

ಸಂತ್ರಸ್ತರಿಗೆ ಸರ್ಕಾರದ ನೆರವು: ಸುಧಾಕರ್ ಭರವಸೆ

ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2013, 6:03 IST
Last Updated 13 ಸೆಪ್ಟೆಂಬರ್ 2013, 6:03 IST

ಹಿರಿಯೂರು: ನಗರದಲ್ಲಿ ಗುರುವಾರ ಬೆಳಗಿನ ಜಾವ ಸುರಿದ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಶಾಸಕ ಡಿ.ಸುಧಾಕರ್ ಭೇಟಿ ನೀಡಿ ಸಂತ್ರಸ್ತರಿಗೆ ಸಾಂತ್ವನ ಹೇಳಿದರು.

ಪುರಸಭೆ ಮತ್ತು ಕಂದಾಯ ಇಲಾಖೆಗಳಿಂದ ತಕ್ಷಣದ ಪರಿಹಾರ ಕೊಡಿಸಲಾಗುವುದು. ಹೆಚ್ಚಿನ
ನೆರವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿ ಸೇರಿದಂತೆ ಸರ್ಕಾರದಿಂದಸಾಧ್ಯವಾದ ಎಲ್ಲನೆರವನ್ನು ಕೊಡಿಸಲಾಗುವುದುಎಂದು ಅವರು ಭರವಸೆನೀಡಿದರು.

ಇದುವರೆಗೂ ಮಳೆಯಾಗಿಲ್ಲ ಎಂಬ ಆತಂಕವಿತ್ತು. ಈಗ ಇದ್ದಕ್ಕಿದ್ದಂತೆ ಸುರಿದ ಮಳೆ ಒಂದೆಡೆ ಸಂತಸ ಉಂಟು ಮಾಡಿದ್ದರೂ ಸಂತ್ರಸ್ತರು ಅನುಭವಿಸುತ್ತಿರುವ ಸಂಕಟವನ್ನು ನೋಡಿ ಬೇಸರವಾಗಿದೆ. ತಾಲ್ಲೂಕಿನ ಧರ್ಮಪುರ, ಜವನಗೊಂಡನಹಳ್ಳಿ ಹಾಗೂ ಕಸಬಾ ಹೋಬಳಿಯ ಕೆಲವು ಕೆರೆಗಳಿಗೆ ಸ್ವಲ್ಪಮಟ್ಟಿನ ನೀರು ಬಂದಿರುವುದು, ಜಮೀನುಗಳಲ್ಲಿನ ಚೆಕ್ ಅಧಿಕಾರಿಗಳು ಮಳೆ ಅನಾಹುತಕ್ಕೆ ಒಳಗಾಗಿರುವ ಪ್ರದೇಶಗಳಿಗೆ ತಕ್ಷಣ ಭೇಟಿ ನೀಡಿ ಪರಿಹಾರ ಕಾರ್ಯ ಕೈಗೊಳ್ಳಬೇಕು. ನಗರದಲ್ಲಿ ಕಟ್ಟಿಕೊಂಡಿರುವ ಚರಂಡಿಗಳನ್ನು ಶುಚಿಗೊಳಿಸಬೇಕು. ಶಾಲಾ ಆವರಣಗಳಲ್ಲಿ  ನಿಂತಿರುವ ನೀರನ್ನು ಹೊರಹಾಕಬೇಕು. ಬೆಳೆ ಕಳೆದುಕೊಂಡಿರುವ ರೈತರಿಗೆ ತಕ್ಷಣ ಪರಿಹಾರ ವಿತರಣೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮುಖಂಡರಾದ ಬಿ.ವಿ.ಮಾಧವ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತಿಪ್ಪೇಸ್ವಾಮಿ, ಖಾದಿ ರಮೇಶ್, ಕಂದಿಕೆರೆ ಸುರೇಶ್‌ಬಾಬು, ಸಾದತ್‌ವುಲ್ಲಾ, ಎಚ್.ಎ.ರಾಜು, ಅಜ್ಜಣ್ಣ, ಅಶೋಕ್, ರವಿಚಂದ್ರ, ಗೌರಿಶಂಕರ್, ಪುರಸಭೆ ಮುಖ್ಯಾಧಿಕಾರಿ ಜಯಣ್ಣ
ಮತ್ತಿತರರು ಉಪಸ್ಥಿತರಿದ್ದರು.

ಜೆಡಿಎಸ್ ಅಧ್ಯಕ್ಷರ ಭೇಟಿ:- ಮಳೆ ಅನಾಹುತದಿಂದ ಹಾನಿಗೊಳಗಾದ ಪ್ರದೇಶಗಳಿಗೆ ಜೆಡಿಎಸ್ ರಾಜ್ಯಾಧ್ಯಕ್ಷ
ಎ.ಕೃಷ್ಣಪ್ಪ ಗುರುವಾರ ಸಂಜೆಭೇಟಿ ನೀಡಿ ಪರಿಶೀಲನೆ ನಡೆಸಿದರು.

ಜಿಲ್ಲಾಧಿಕಾರಿಗಳು ಹಾಗೂ ತಹಶೀಲ್ದಾರರ ಜತೆ ದೂರವಾಣಿಯಲ್ಲಿ ಮಾತನಾಡಿದ ಅವರು ಸಂತ್ರಸ್ತರಿಗೆ ಸಾಧ್ಯವಾದ ಎಲ್ಲಾ ನೆರವು
ನೀಡುವಂತೆ ತಿಳಿಸಿದರು. ಇಷ್ಟೊಂದು ಪ್ರಮಾಣದಲ್ಲಿ ಮಳೆ ಬಿದ್ದರೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಬಗ್ಗೆ ಪುರಸಭೆ ಸಮಗ್ರ ಯೋಜನೆ ರೂಪಿಸಿಕೊಳ್ಳಬೇಕು ಎಂದು ಅವರು ಸಲಹೆ ಮಾಡಿದರು.

ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಡಿ.ಯಶೋಧರ, ಬಿ.ಎಚ್. ಮಂಜುನಾಥ್, ಶಿವಪ್ರಸಾದಗೌಡ, ಮಹಮದ್ ಫಕೃದ್ದೀನ್,
ಬಿ.ಕೆ. ಉಗ್ರಮೂರ್ತಿ, ಶಿವಶಂಕರ್, ದಾಸಪ್ಪ, ತಿಮ್ಮರಾಜ್, ಗುಣಶೇಖರ್, ಜ್ಯೋತಿಲಕ್ಷ್ಮಿ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.