ಚಿತ್ರದುರ್ಗ: ನಗರದಲ್ಲಿ ಮಂಗಳವಾರ ನಡೆದ ತಾಲ್ಲೂಕು ಪಂಚಾಯ್ತಿ ಸಾಮಾನ್ಯಸಭೆಗೆ ಅಧಿಕಾರಿಗಳ ಗೈರು ಹಾಜರಿಯಿಂದ ಕೆಂಡಾಮಂಡಲವಾದ ಸದಸ್ಯರು, ಸಭೆ ಆರಂಭಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.
ಪ್ರತಿ ಬಾರಿ ಅಧಿಕಾರಿಗಳ ಸಮಸ್ಯೆ ಪುನಾರಾವರ್ತನೆಯಾಗುತ್ತದೆ. ಸಭೆಗೆ ಜನಪ್ರತಿನಿಧಿಗಳು ಬರುತ್ತಾರೆ. ಆದರೆ, ನಿಯಮಿತವಾಗಿ ಸಂಬಳ ಪಡೆಯುವ ಅಧಿಕಾರಿಗಳು ಏಕೆ ಬರುವುದಿಲ್ಲ. ಅಧಿಕಾರಿಗಳು ಇಲ್ಲದೆ ಸಭೆ ಹೇಗೆ ಮಾಡುವುದು. ಅ
ಂಬೇಡ್ಕರ್ ನಿಗಮ, ಆಹಾರ ಇಲಾಖೆ ಮುಂತಾದ ಅಧಿಕಾರಿಗಳು ಸಭೆಗೆ ಆಗಮಿಸುವುದಿಲ್ಲ. ಆದ್ದರಿಂದ ಸಭೆಯನ್ನೇ ಮುಂದೂಡಿ ಎಂದು ಸದಸ್ಯರಾದ ಹಂಪೇಶ್, ಸಿರುವುಲ್ಲಪ್ಪ ಕಿಡಿಕಾರಿದರು.
ಸಭೆಗೆ ಬಂದರೆ ್ಙ 5 ಸಾವಿರ ಲಂಚ ಕೊಡಬೇಕಾಗುತ್ತದೆಯೇ? ಲಂಚ ಕೊಡಬೇಕಾಗುತ್ತದೆ ಎಂದು ಅಧಿಕಾರಿಗಳು ಸಭೆಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆಯೇ ಎಂದು ಸದಸ್ಯ ರಾಜಕುಮಾರ್ ಪ್ರಶ್ನಿಸಿದರು.
ನಾವು ಕೆಲವು ಅಧಿಕಾರಿಗಳನ್ನು ನೋಡಿಯೇ ಇಲ್ಲ. ಇದಕ್ಕಾದರೂ ಅವರನ್ನು ಸಭೆಗೆ ಕರೆಯಿಸಿ ಎಂದು ಸದಸ್ಯರು ಪಟ್ಟು ಹಿಡಿದರು. ಇದರಿಂದ 45 ನಿಮಿಷ ತಡವಾಗಿ ಸಭೆ ಆರಂಭವಾಯಿತು. ಕೆಲವು ಅಧಿಕಾರಿಗಳು ಸಭೆಗೆ ಆಗಮಿಸಿದ ನಂತರ 11.45ಕ್ಕೆ ಸಭೆ ಆರಂಭವಾಯಿತು.
ಅಧಿಕಾರಿಗೆ ತರಾಟೆ
ಸಸಿ ನೆಡುವ ಸಂಬಂಧ ನಿರ್ಲಕ್ಷ್ಯ ವಹಿಸಿದ ಅರಣ್ಯಾಧಿಕಾರಿ ವಿಶ್ವನಾಥ್ ಅವರನ್ನು ತಾ.ಪಂ. ಸದಸ್ಯರು ತರಾಟೆಗೆ ತೆಗೆದುಕೊಂಡರು.
ಸದಸ್ಯರು ಕೇಳಿದ ಪ್ರಶ್ನೆಗೆ ಉತ್ತರಿಸಲು ವಿಶ್ವನಾಥ್ ತಡವರಿಸಿದರು. ಪ್ರತಿಯೊಂದು ಉತ್ತರ ಹೇಳುವಾಗ ಸಹಾಯಕರ ನೆರವು ಕೇಳುತ್ತಿದ್ದರು.
ಅಂದಾಜುಪಟ್ಟಿ ಮಾಡದಿರುವ ಬಗ್ಗೆ ಮತ್ತು ಸಸಿಗಳನ್ನು ಮಳೆಗಾಲದಲ್ಲಿ ನೆಡದೆ ವಿಳಂಬ ಮಾಡಿದ ಬಗ್ಗೆ ಸದಸ್ಯರು ಕಿಡಿಕಾರಿದರು. 2011-12ನೇ ಸಾಲಿನಲ್ಲಿ ರೈತರಿಗೆ ಒಂದೂ ಸಸಿ ನೀಡಿಲ್ಲ. ನೀಡಿದರೆ ಅಂತಹ ಫಲಾನುಭವಿಗಳ ಪಟ್ಟಿ ನೀಡಿ ಎಂದು ಸದಸ್ಯರು ಪ್ರಶ್ನಿಸಿದರು.
ನಿಮಗೆ ಯಾವುದೇ ಜವಾಬ್ದಾರಿ ಇಲ್ಲ ಎಂದು ಪ್ರಶ್ನೆಗಳ ಮಳೆಗೈದ ಸದಸ್ಯರು ಕೊನೆಗೆ ಉದ್ಯೋಗ ಖಾತ್ರಿಯಲ್ಲಿ ಒಂದು ದಿನಕ್ಕೆ ಒಬ್ಬ ಕೂಲಿಕಾರ್ಮಿಕನಿಗೆ ಎಷ್ಟು ಹಣ ಕೊಡುತ್ತಾರೆ ಗೊತ್ತೆ ಎಂದು ಪ್ರಶ್ನಿಸಿದಾಗ ವಿಶ್ವನಾಥ್ ಮೌನವಹಿಸಿದರು.ಪುನರಾವರ್ತನೆಯಾದ ಅಧಿಕಾರಿಗಳ ಗೈರುಹಾಜರಿ: ಸದಸ್ಯರ ಕಿಡಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.