ADVERTISEMENT

ಸಮಾಜಮುಖಿ ಸೇವಾಕಾರ್ಯ: ಸಂಸ್ಥೆಗಳಿಗೆ ಕರೆ

​ಪ್ರಜಾವಾಣಿ ವಾರ್ತೆ
Published 2 ಜನವರಿ 2012, 10:05 IST
Last Updated 2 ಜನವರಿ 2012, 10:05 IST

ಹಿರಿಯೂರು: ಸಮಾಜಮುಖಿ ಸೇವಾ ಕಾರ್ಯಗಳನ್ನು ಸಂಘ- ಸಂಸ್ಥೆಗಳು ಹಮ್ಮಿಕೊಳ್ಳುವ ಮೂಲಕ ಬಡಜನರ ನೆರವಿಗೆ ನಿಲ್ಲಬೇಕು ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಎಸ್.ಕೆ. ಮೋಹನ್‌ಕುಮಾರ್ ಕರೆ ನೀಡಿದರು.

ನಗರದ ಲಯನ್ಸ್ ಉಚಿತ ಕಣ್ಣಿನ  ಆಸ್ಪತ್ರೆ ಆವರಣದಲ್ಲಿ  ಭಾನುವಾರ ರೆಡ್‌ಕ್ರಾಸ್ ಸಂಸ್ಥೆ ಮತ್ತು ಲಯನ್ಸ್ ಕ್ಲಬ್ ಆಶ್ರಯದಲ್ಲಿ  ಹಮ್ಮಿಕೊಂಡಿದ್ದ ಆರೋಗ್ಯ ರಕ್ಷಾ ಯೋಜನೆಯ ನೋಂದಣಿ ಪ್ರಾರಂಭೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ರೆಡ್‌ಕ್ರಾಸ್ ಮತ್ತು ಲಯನ್ಸ್ ಸಂಸ್ಥೆಗಳು ಜಾರಿಗೊಳಿಸಲು ಹೊರಟಿರುವ ಆರೋಗ್ಯ ರಕ್ಷಾ ಯೋಜನೆ ಬಡವರಿಗೆ ಬಹಳಷ್ಟು ಅನುಕೂಲಕರವಾಗಿದೆ. ್ಙ 1 ಲಕ್ಷ ವರೆಗೆ ಚಿಕಿತ್ಸಾ ವೆಚ್ಚ ಭರಿಸುವ ಜೊತೆಗೆ ಅತ್ಯಾಧುನಿಕ ತಂತ್ರಜ್ಞಾನ ಸೌಲಭ್ಯಗಳಿರುವ ಆಸ್ಪತ್ರೆಗಳು ಈ ಯೋಜನೆ ವ್ಯಾಪ್ತಿಯಲ್ಲಿರುವುದರಿಂದ ಉತ್ತಮ ಚಿಕಿತ್ಸೆ ಪಡೆಯಬಹುದಾಗಿದೆ ಎಂದು ಅವರು ತಿಳಿಸಿದರು.

ಬೆಂಗಳೂರಿನ ನಾರಾಯಣ ಹೃದಯಾಲಯದ ಜಿ.ಎಂ. ದೇವರಾಜ ನಾಯಕ್ ಮಾತನಾಡಿ, ಸದರಿ ಯೋಜನೆಗೆ 5 ಸಾವಿರ ಜನ ನೋಂದಣಿ ಮಾಡಿಸಿಕೊಂಡರೆ, ತಾಲ್ಲೂಕಿನಲ್ಲಿಯೇ ಆಸ್ಪತ್ರೆ ಸೌಲಭ್ಯ ಆರಂಭಿಸಲಾಗುವುದು. ಬಡ- ಮಧ್ಯಮವರ್ಗದವರಿಗೆ ತತಕ್ಷಣ ಎದುರಾಗುವ ಆರೋಗ್ಯ ಅವಘಡಗಳಿಗೆ ಈ ಯೋಜನೆ ಪ್ರಯೋಜನಕಾರಿ ಎಂದು ತಿಳಿಸಿದರು.

ನಿವೃತ್ತ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಂ.ಎನ್. ಶ್ರೀಪತಿ, ಕೆ.ಆರ್. ವೆಂಕಟೇಶ್, ಬಿ.ಎಸ್. ನವಾಬ್‌ಸಾಬ್, ಕೆ.ವಿ. ಅಮರೇಶ್, ಡಿ. ಗಂಗಾಧರ್ ಮಾತನಾಡಿದರು. ಎಚ್.ಎಸ್. ಸುಂದರರಾಜ್ ಅಧ್ಯಕ್ಷತೆ ವಹಿಸಿದ್ದರು.

ವೈ.ಎಸ್. ಆಶ್ವತ್ಥಕುಮಾರ್, ಮಹಮದ್ ಫಕೃದ್ದೀನ್, ಎಚ್.ಎಸ್. ನಾಗರಾಜಗುಪ್ತ, ಡಾ.ಜೆ.ಆರ್. ಸುಜಾತಾ. ಮುಂಗಸವಳ್ಳಿ ಶಾರದಮ್ಮ, ಎಂ.ಎಲ್.ಗಿರಿಧರ್, ಕೇಶವಮೂರ್ತಿ, ಎಂ.ಎನ್.ರಮೇಶ್, ವೆಂಕಟಾಚಲ, ಎಚ್.ಪಿ. ಸತೀಶ್, ಡಿ. ದೇವರಾಜಮೂರ್ತಿ, ಜಗನ್ನಾಥ್. ಪರಮೇಶ್ವರಭಟ್, ಸತೀಶ್‌ಬಾಬು, ಪಾರ್ವತಮ್ಮ, ನಾಗಸುಂದರಮ್ಮ, ಶಾಂತಾಚಿಕ್ಕಣ್ಣ, ರವಿಶಂಕರ್, ಸಿ. ಪ್ರವೀಣ್, ಎಂ.ಯು. ಶಿವರಾಂ, ತ್ರಿಯಂಭಕೇಶ್ವರ, ಮಹಾಬಲೇಶ್ವರಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಎಂ.ಎನ್. ಸೌಭಾಗ್ಯವತಿ ದೇವರು ಸ್ವಾಗತಿಸಿದರು. ಶಶಿಕಲಾ ರವಿಶಂಕರ್ ವಂದಿಸಿದರು. ಎಂ.ಎಸ್. ರಾಘವೇಂದ್ರ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.