ADVERTISEMENT

ಸೇವಾ ಮನೋಭಾವ ಕಣ್ಮರೆ: ವಿಷಾದ

ದಕ್ಷಿಣ ಆಫ್ರಿಕಾದ ನೆಲ್ಸನ್ ಮಂಡೇಲಾ ಜನ್ಮ ದಿನಾಚರಣೆಯಲ್ಲಿ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 19 ಜುಲೈ 2013, 10:50 IST
Last Updated 19 ಜುಲೈ 2013, 10:50 IST

ಚಿತ್ರದುರ್ಗ: ನಗರದ ಸಿದ್ಧರಾಮೇಶ್ವರ ಭೋವಿ ಗುರುಪೀಠದಲ್ಲಿ ಗುರುವಾರ ಪೀಠಾಧ್ಯಕ್ಷ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಅವರ ಹುಟ್ಟುಹಬ್ಬ ಹಾಗೂ ದಕ್ಷಿಣ ಆಫ್ರಿಕಾದ ನೆಲ್ಸನ್ ಮಂಡೇಲಾ ಅವರ ಹುಟ್ಟುಹಬ್ಬವನ್ನು ಆಚರಿಸಲಾಯಿತು.

ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು, ಸ್ವಾಮೀಜಿಯವರಿಗೆ ಹುಟ್ಟುಹಬ್ಬದ ಉಡುಗೊರೆಯಾಗಿ ಲೇಖನಿಯನ್ನು ನೀಡಿದರು. `ಶೋಷಿತ ಸಮಾಜವನ್ನು ಅಭಿವೃದ್ಧಿಪಡಿಸಲು ಲೇಖನಿಯನ್ನು ಅಸ್ತ್ರವಾಗಿ ಬಳಸಿ' ಎಂದು ಶುಭ ಕೋರಿದರು.

ನೆಲ್ಸನ್ ಮಂಡೇಲಾ ಅವರ ಹುಟ್ಟು ಹಬ್ಬದ ಅಂಗವಾಗಿ ಆಯೋಜಿಸಿದ್ದ ರಕ್ತದಾನ ಶಿಬಿರವನ್ನು ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಪ್ರಸ್ತುತ ಯುವಕರಲ್ಲಿ  ಸೇವಾ ಮನೋಭಾವ ಕಣ್ಮರೆಯಾಗುತ್ತಿದೆ. ಯುವಕರು ರಕ್ತದಾನದಂತಹ ಶಿಬಿರದ ಮೂಲಕ ಸೇವಾ ಮನೋಭಾವ ಪ್ರದರ್ಶಿಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಕುಂಚಿಟಿಗ ಮಹಾಸಂಸ್ಥಾನ ಗುರುಪೀಠಾಧ್ಯಕ್ಷ ಶಾಂತವೀರ ಸ್ವಾಮೀಜಿ, ಯಾದವ ಗುರುಪೀಠದ ಕೃಷ್ಣ ಯಾದವನಂದ ಸ್ವಾಮೀಜಿ, ಕೇತೇಶ್ವರ ಗುರುಪೀಠದ ಕೇತೇಶ್ವರ ಸ್ವಾಮೀಜಿ, ದಾವಣಗೆರೆ ವಿರಕ್ತಮಠದ ಬಸವಪ್ರಭು ಸ್ವಾಮೀಜಿ, ಮಲ್ಲಾರಹಟ್ಟಿ ತಿಪ್ಪೇರುದ್ರ ಸ್ವಾಮೀಜಿ, ಗುಲ್ಬರ್ಗದ ಸಿದ್ದಬಸವ ಕಬೀರಾ ಸ್ವಾಮೀಜಿ, ಅಥಣಿಯ ಶಿವಬಸವ ಸ್ವಾಮೀಜಿ, ಶಿರಸಿಯ ಮಲ್ಲಿಕಾರ್ಜುನ ಸ್ವಾಮೀಜಿ, ಚಳ್ಳಕೆರೆಯ ಕಿರಣ್ ಸ್ವಾಮೀಜಿ, ಕುಂಬಾರ ಗುರುಪೀಠದ ಗುಂಡಯ್ಯ ಸ್ವಾಮೀಜಿ, ಲಿಂಗಸೂರಿನ ಮುರುಘೇಂದ್ರ ಸ್ವಾಮೀಜಿ, ಸಿರಗುಪ್ಪ ಬಸವಭೂಷಣ ಸ್ವಾಮೀಜಿ, ಹರಳಯ್ಯ ಗುರುಪೀಠದ ಹರಳಯ್ಯ ಸ್ವಾಮೀಜಿ, ಶಿಕಾರಿಪುರದ ಚನ್ನಬಸವ ಸ್ವಾಮೀಜಿ, ಮಾಜಿ ಶಾಸಕ ಎಂ. ಚಂದ್ರಪ್ಪ, ಮುಖಂಡರಾದ ಎಂ. ರಾಮಪ್ಪ, ಗುರಪ್ಪ, ಎಚ್. ಭೀಮರಾಜು, ತಿಮ್ಮಣ್ಣ, ಮಂಜಣ್ಣ, ಚಂದ್ರಶೇಖರ, ಹೊಳಲ್ಕೆರೆ ಮೋಹನ್, ಚಳ್ಳಕೆರೆ ಪುಟ್ಟಣ್ಣ, ಹೊಸದುರ್ಗದ ಮಂಜಣ್ಣ ಹಾಜರಿದ್ದರು.

ಇಮ್ಮಡಿ ಸಿದ್ದರಾಮೇಶ್ವರ ರಕ್ತನಿಧಿ ಸಂಪರ್ಕ ಕೇಂದ್ರದ 20 ಯುವಕರು ರಕ್ತದಾನ ಮಾಡಿದರು.  ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಅವರು ರಕ್ತನಿಧಿ ಕೇಂದ್ರಕ್ಕೆ ಕೊಡುಗೆಯಾಗಿ ಲ್ಯಾಪ್‌ಟಾಪ್ ಕೊಟ್ಟರು. ವಡ್ಡರಸಿದ್ದವ್ವನಹಳ್ಳಿ ಪ್ರಕಾಶ್ ಮತ್ತು ಕುಟುಂಬದವರು ದಾಸೋಹ ವ್ಯವಸ್ಥೆ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.