ADVERTISEMENT

ಹರ್ತಿಕೋಟೆಯಲ್ಲೊಂದು ಮಾದರಿ ವಿದ್ಯಾರ್ಥಿನಿಲಯ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2012, 5:50 IST
Last Updated 26 ಮಾರ್ಚ್ 2012, 5:50 IST

ಹಿರಿಯೂರು: ಪರಿಶಿಷ್ಟ ಜಾತಿ- ವರ್ಗ, ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯಗಳೆಂದರೆ ಕೊಳಕು, ಅವ್ಯವಸ್ಥೆಗೆ ಕುಖ್ಯಾತಿ ಪಡೆದಿವೆ. ಇದಕ್ಕೆ ಅಪವಾದ ಎಂಬಂತೆ ಇಲ್ಲೊಂದು ಹಾಸ್ಟೆಲ್ ಇದೆ.

ವ್ಯವಸ್ಥಿತ ನಿರ್ವಹಣೆ ಇಲ್ಲಿ ಕಾಣುತ್ತದೆ. ಉತ್ತಮ ಶೌಚಾಲಯ, ವಿದ್ಯಾರ್ಥಿಗಳ ಕೊಠಡಿ, ಅಡುಗೆ ಮನೆ, ಉಗ್ರಾಣ, ಪ್ರವೇಶದ್ವಾರ ಕೊನೆಗೆ ಮಹಡಿ ಮೇಲೆ ಹತ್ತುವ ಮೆಟ್ಟಿಲುಗಳು ಸ್ವಚ್ಛವಾಗಿರುತ್ತವೆ. ಇಲ್ಲಿನ ಕೊರತೆಯೆಂದರೆ ಇಷ್ಟೊಂದು ದೊಡ್ಡ ವಿದ್ಯಾರ್ಥಿನಿಲಯಕ್ಕೆ 33 ವಿದ್ಯಾರ್ಥಿಗಳಿರುವುದು.

ಹರ್ತಿಕೋಟೆಯಿಂದ ಮಲ್ಲಪ್ಪನ ಹಳ್ಳಿಗೆ ಹೋಗುವ ಮಾರ್ಗದಲ್ಲಿ ಗ್ರಾಮದ ಹೊರ ಭಾಗದಲ್ಲಿ ಸಿದ್ದಾರ್ಥ ಪ್ರೌಢಶಾಲೆಯ ಆವರಣದಲ್ಲಿ ಹಿಂದುಳಿದ ವರ್ಗಗಳ ಇಲಾಖೆ ವತಿಯಿಂದ ಒಂದೂವರೆ ವರ್ಷದ ಹಿಂದೆ ಸುಮಾರು ್ಙ 78 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ (13 ಕೊಠಡಿ ಹಾಗೂ ಕಾಂಪೌಂಡ್ ಸೇರಿ) ವಿದ್ಯಾರ್ಥಿ ನಿಲಯದಲ್ಲಿ, ಮನೆಗಳಲ್ಲೂ ಕಾಣದ ಸ್ವಚ್ಛತೆ ಇದೆ. ಇದರ ಹಿಂದಿನ ರೂವಾರಿ ವಿದ್ಯಾರ್ಥಿ ನಿಲಯದ ಮೇಲ್ವಿಚಾರಕ ಶ್ರೀನಿವಾಸ್.

ಇತ್ತೀಚಿನ ವರ್ಷಗಳಲ್ಲಿ ಸರ್ಕಾರ ಹಳ್ಳಿಗಳಲ್ಲಿ ಸಾಕಷ್ಟು ಪ್ರೌಢಶಾಲೆಗಳ ಆರಂಭಕ್ಕೆ ಅನುಮತಿ ನೀಡಿರುವುದು, ನಗರಕ್ಕೆ ಹೋಗಿ ಓದಲು ಇಚ್ಛಿಸುವ ಮಕ್ಕಳಿಗೆ ಬೇಡ ಎನ್ನದೆ ಕಳುಹಿಸುವ ಪೋಷಕರು ಹೆಚ್ಚಿರುವ ಕಾರಣಕ್ಕೆ ಗ್ರಾಮಾಂತರ ಪ್ರದೇಶದ ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ಕಡಿಮೆ ಆಗುತ್ತಿದೆ ಎಂಬುದು ಶಿಕ್ಷಕರ ಅಭಿಪ್ರಾಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.