ADVERTISEMENT

ಹಾಸ್ಟೆಲ್ ಅವ್ಯವಸ್ಥೆ: ವಿದ್ಯಾರ್ಥಿಗಳ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2013, 9:25 IST
Last Updated 25 ಏಪ್ರಿಲ್ 2013, 9:25 IST

ಚಿತ್ರದುರ್ಗ: ಹಾಸ್ಟೆಲ್ ಅವ್ಯವಸ್ಥೆ ಖಂಡಿಸಿ ವಿದ್ಯಾರ್ಥಿಗಳು ಬುಧವಾರ ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿನಿಲಯದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ಹಾಸ್ಟೆಲ್‌ನಲ್ಲಿ ಕುಡಿಯುವನೀರಿನ ವ್ಯವಸ್ಥೆ ಇಲ್ಲ. ಲವಣಾಂಶವಿರುವ ನೀರಿನಿಂದ ವಿದ್ಯಾರ್ಥಿಗಳು ಅನಾರೋಗ್ಯ ಕ್ಕೀಡಾಗುತ್ತಿದ್ದಾರೆ. ಕಟ್ಟಡದಲ್ಲಿನ ತೊಟ್ಟಿ ನೀರು ಸ್ವಚ್ಛಗೊಳಿಸಿಲ್ಲ. ಈ ನೀರು ಸ್ನಾನ ಮಾಡಿದರೆ ಗುಳ್ಳೆ ಬರುತ್ತದೆ. ಸ್ನಾನಕ್ಕೆ ಮತ್ತು ಶೌಚಾಲಯಕ್ಕೂ ನೀರು ಇಲ್ಲದಂತಾಗಿದೆ ಎಂದು ವಿದ್ಯಾರ್ಥಿಗಳು ದೂರಿದರು.

ಇಲ್ಲಿ ಊಟದ ವ್ಯವಸ್ಥೆಯೂ ಸಮರ್ಪಕವಾಗಿಲ್ಲ. ಕೊಳೆತ ತರಕಾರಿಯನ್ನು ಬಳಸಲಾಗುತ್ತಿದೆ. ಅಲ್ಪಸಂಖ್ಯಾತರ ವಿದ್ಯಾರ್ಥಿನಿಲಯ ಆಗಿದ್ದರೂ ಮಾಂಸಾಹಾರ ನೀಡುತ್ತಿಲ್ಲ ಎಂದು ದೂರಿದರು.

ಹಾಸ್ಟೆಲ್‌ನಲ್ಲಿ ಕೇವಲ 20 ವಿದ್ಯಾರ್ಥಿಗಳಿದ್ದರೂ ಕೇವಲ 20 ವಿದ್ಯಾರ್ಥಿಗಳಿದ್ದಾರೆ ಎಂದು ದಾಖಲಾತಿಯಲ್ಲಿ ತೋರಿಸಲಾ ಗುತ್ತಿದೆ ಎಂದು ದೂರಿದರು.
ಷರೀಫ್, ಫಕ್ರುದ್ದೀನ್, ಅಜೀಜ್ ನಾಸೀರ್, ಮೀರಾಸಾಬ್, ರಸೂಲ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.