ADVERTISEMENT

ಹಿರಿಯೂರು: ಬೃಹತ್‌ ಉದ್ಯೋಗ ಮೇಳ ಇಂದು

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2018, 6:36 IST
Last Updated 10 ಮಾರ್ಚ್ 2018, 6:36 IST
ಶ್ರೀನಿವಾಸ್
ಶ್ರೀನಿವಾಸ್   

ಹಿರಿಯೂರು: ನಗರದ ನೆಹರೂ ಮೈದಾನದಲ್ಲಿ ಮಾರ್ಚ್‌ 10ರಂದು ಬೆಳಿಗ್ಗೆ 9ಕ್ಕೆ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ, ಅಕ್ಷರ ಫೌಂಡೇಷನ್ ಗ್ರಾಮೀಣಾಭಿವೃದ್ಧಿ ಸಂಸ್ಥೆ ಸಹಯೋಗದಲ್ಲಿ ಉದ್ಯೋಗ ಮೇಳ ಹಮ್ಮಿಕೊಂಡಿದೆ ಎಂದು ಬಿಜೆಪಿ ರಾಜ್ಯ ಒಬಿಸಿ ಮೋರ್ಚಾ ಉಪಾಧ್ಯಕ್ಷ ಡಿ.ಟಿ. ಶ್ರೀನಿವಾಸ್ ತಿಳಿಸಿದ್ದಾರೆ.

‘ತಾಲ್ಲೂಕಿನಲ್ಲಿ ಸತತ ಆರೇಳು ವರ್ಷಗಳಿಂದ ಬರಗಾಲ ತಾಂಡವವಾಡುತ್ತಿದೆ. ಕೆರೆಕಟ್ಟೆಗಳಲ್ಲಿ ನೀರಿಲ್ಲದೆ ಅಡಿಕೆ, ತೆಂಗಿನ ತೋಟಗಳು ಒಣಗುತ್ತಿವೆ. ಬಡತನದಿಂದಾಗಿ ಮಾರ್ಚ್‌ 8ರಂದು ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸರ್ಕಾರಿ ಉದ್ಯೋಗ ಪಡೆಯುವುದು ಸಾಹಸದ ಕೆಲಸ. ಹೀಗಾಗಿ ದಲಿತರು, ಬಡವರು, ನಿರ್ಗತಿಕರ ಬದುಕಿಗೆ ಆಸರೆಯಾಗಲಿ ಎಂಬ ಕಾರಣಕ್ಕೆ ಮೇಳ ಆಯೋಜಿಸಿದ್ದೇವೆ. ಕನಿಷ್ಠ 5,000 ಯುವಕ–ಯುವತಿಯರಿಗೆ ಉದ್ಯೋಗ ಕೊಡಿಸಬೇಕೆಂಬ ಪ್ರಯತ್ನ ನಮ್ಮದು. ಕಂಪನಿಗಳು ಇಚ್ಛಿಸುವ ಕೌಶಲ ಇರುವ ಅಭ್ಯರ್ಥಿಗಳಿಗೆ ಸ್ಥಳದಲ್ಲೇ ನೇಮಕಾತಿ ಆದೇಶ ಪತ್ರ ಕೊಡಲಾಗುತ್ತದೆ. ಕೌಶಲ ಇಲ್ಲದವರಿಗೆ ಸ್ವಯಂ ಸೇವಾ ಸಂಸ್ಥೆಗಳ ಮೂಲಕ 90 ದಿನಗಳ ಕೌಶಲ ತರಬೇತಿ ನೀಡಿ, ಉದ್ಯೋಗ ಕೊಡಿಸುವ ಪ್ರಯತ್ನ ಮಾಡುತ್ತೇವೆ’ ಎಂದು ಹೇಳಿದ್ದಾರೆ.

ಇನ್ಫೊಸಿಸ್, ಏಮ್ಸ್, ಈಗಲ್, ಕೋಟಕ್ ಸೇರಿದಂತೆ ಸುಮಾರು 80 ಕಂಪನಿಗಳು ಮೇಳಕ್ಕೆ ಬರಲಿದ್ದು, 18ರಿಂದ 35 ವಯೋಮಾನದ, 8ನೇ ತರಗತಿಯಿಂದ ಸ್ನಾತಕೋತ್ತರ ಪದವಿವರೆಗೆ ಉತ್ತೀರ್ಣರಾದವರು ಪಾಲ್ಗೊಳ್ಳಬಹುದಾಗಿದೆ. ಈ ಮೇಳದಲ್ಲಿ ಅಂಗವಿಕಲರಿಗೂ ಅವಕಾಶ ಕಲ್ಪಿಸಲಾಗಿದೆ. ಪ್ರವೇಶ ಉಚಿತವಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.