ADVERTISEMENT

ಹೊಸ ವರ್ಷಕ್ಕೆ ಸಂಭ್ರಮದ ಸ್ವಾಗತ

​ಪ್ರಜಾವಾಣಿ ವಾರ್ತೆ
Published 1 ಜನವರಿ 2012, 10:55 IST
Last Updated 1 ಜನವರಿ 2012, 10:55 IST

ಚಿತ್ರದುರ್ಗ: ಹೊಸ ವರ್ಷಕ್ಕೆ ಹರುಷದ ಸ್ವಾಗತ. ನಗರದಲ್ಲಿ ಸಂಭ್ರಮದಿಂದ ಹೊಸ ವರ್ಷವನ್ನು ಜನತೆ ಉಲ್ಲಾಸ, ಉತ್ಸಾಹದಿಂದ ಬರಮಾಡಿಕೊಂಡರು.

ಕಳೆದ ವರ್ಷದ ನೋವು-ನಲಿವುಗಳನ್ನು ಮರೆತು ಹೊಸ ವರ್ಷ ಬದುಕಿಗೆ ಹೊಸ ಹುಮ್ಮಸ್ಸು, ಸಂತಸ ಮೂಡಿಸಲಿ ಎಂದು ಆಶಿಸಿದರು.

ಯುವಕರು ರಸ್ತೆಗಳಲ್ಲಿ ಕುಣಿದು ಕುಪ್ಪಳಿಸಿದರು. ಪರಸ್ಪರ ಹೊಸ ವರ್ಷದ ಶುಭಾಶಯ ಕೋರಿದರು. ಮೊಬೈಲ್‌ಗಳಂತೂ ಬ್ಯೂಸಿ.

ಎಲ್ಲರೂ ತಮ್ಮ ಆತ್ಮೀಯರಿಗೆ, ಸ್ನೇಹಿತರಿಗೆ, ಹಿರಿಯರಿಗೆ, ಕಿರಿಯರಿಗೆ ಹೊಸ ವರ್ಷದ ಶುಭಾಶಯದ ಸಂದೇಶಗಳನ್ನು ಕಳುಹಿಸುವುದರಲ್ಲಿ ತಲ್ಲೆನರಾಗಿದ್ದರು. ಇದರಿಂದ ನೆಟ್‌ವರ್ಕ್ ಒತ್ತಡದಿಂದ ಸಂದೇಶಗಳು ತಡವಾಗಿ ತಲುಪುತ್ತಿದ್ದವು.

ಬಾರ್ ಹಾಗೂ ಹೋಟೆಲ್‌ಗಳು ಮತ್ತು ಬೇಕರಿಗಳಲ್ಲಿ ಜನದಟ್ಟಣೆ ಇತ್ತು. ಇದರಿಂದ ಭರ್ಜರಿ ವ್ಯಾಪಾರವೂ ನಡೆಯಿತು.

ಹೊಸ ವರ್ಷದ ಅಂಗವಾಗಿ ಹೋಟೆಲ್‌ಗಳಲ್ಲಿ ವಿಶೇಷ ವ್ಯವಸ್ಥೆ ಮಾಡಲಾಗಿತ್ತು. ಸಂಗೀತ ಕಾರ್ಯಕ್ರಮವನ್ನು ಸಹ ಆಯೋಜಿಸಲಾಗಿತ್ತು.

ಮದ್ಯಪಾನ ಪ್ರಿಯರು ಕೇಕೆ ಹಾಕಿ, ಕುಣಿದು ಕುಪ್ಪಳಿಸಿದರು. ಬೇಕರಿಗಳಲ್ಲಿ ಹೊಸ ವರ್ಷದ ಕೇಕ್‌ಗೆ ಡಿಮ್ಯಾಂಡು ಇರುವುದು ಕಂಡು ಬಂತು.

ಹಲವು ಬಡಾವಣೆಗಳಲ್ಲಿ ಹೊಸ ವರ್ಷದ ಅಂಗವಾಗಿ ನಾಗರಿಕರು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು. ಹಲವೆಡೆ ವಿಶೇಷ ಭಕ್ಷ್ಯಗಳ ವ್ಯವಸ್ಥೆಯನ್ನು ಮಾಡಲಾಗಿತ್ತು. ಇನ್ನೂ ಹಲವು ಮಂದಿ ಟಿವಿ ಮುಂದೆ ಕುಳಿತು ವಿವಿಧ ಕಾರ್ಯಕ್ರಮಗಳನ್ನು ವೀಕ್ಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.