ADVERTISEMENT

20 ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 1 ಜೂನ್ 2011, 10:35 IST
Last Updated 1 ಜೂನ್ 2011, 10:35 IST

ಮೊಳಕಾಲ್ಮುರು: ತಾಲ್ಲೂಕಿನ ರೂ 20 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಮಂಗಳವಾರ ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಿ. ಕರುಣಾಕರ ರೆಡ್ಡಿ ಮತ್ತು ಆರೋಗ್ಯ ಸಚಿವ ಬಿ. ಶ್ರೀರಾಮುಲು ನೇತೃತ್ವದಲ್ಲಿ ಚಾಲನೆ ನೀಡಲಾಯಿತು.

ಇಲ್ಲಿನ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಸಚಿವ ಜಿ. ಕರುಣಾಕರ ರೆಡ್ಡಿ, ಮೊಳಕಾಲ್ಮುರು ತಾಲ್ಲೂಕಿನ ಫ್ಲೋರೈಡ್‌ಯುಕ್ತ 27 ಗ್ರಾಮಗಳಿಗೆ ರಾಜೀವ್‌ಗಾಂಧಿ ಸಬ್‌ಮಿಷನ್ ಯೋಜನೆ ಅಡಿ ್ಙ 10.25 ಕೋಟಿ ವೆಚ್ಚದಲ್ಲಿ ಶುದ್ಧ ಕುಡಿಯುವ ನೀರು ನೀಡುವ ಯೋಜನೆಯ ಪ್ರಥಮ ಹಂತಕ್ಕೆ ಪಕುರ್ತಿ ಗ್ರಾಮದಲ್ಲಿ ಚಾಲನೆ ನೀಡಲಾಯಿತು.

ನಂತರ, ರಾಂಪುರದಲ್ಲಿ ರೂ2 ಕೋಟಿ ವೆಚ್ಚದಲ್ಲಿ ನಿರ್ಮಾಣ ಆಗಲಿರುವ ಆರೋಗ್ಯ ಕೇಂದ್ರ ಕಟ್ಟಡಕ್ಕೆ ಶಂಕುಸ್ಥಾಪನೆ ಮತ್ತು ರೂ 1.36 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಆಶ್ರಮ ಶಾಲೆ ಉದ್ಘಾಟನೆ ಇದೇ ವೇಳೆ ಮಾಡಲಾಯಿತು ಎಂದು ಹೇಳಿದರು.


ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ ಅಡಿ ತಲಾರೂ 75 ಲಕ್ಷ ವೆಚ್ಚದಲ್ಲಿ ಕೊಂಡ್ಲಹಳ್ಳಿ ಹಾಗೂ ಅಶೋಕ ಸಿದ್ದಾಪುರದಲ್ಲಿ ನಿರ್ಮಿಸಿರುವ 24ಗಿ7 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಉದ್ಘಾಟನೆ ಮತ್ತು ನಾಗಸಮುದ್ರದಲ್ಲಿ ನಿರ್ಮಾಣ ಆಗಲಿರುವ 24ಡ7 ಆಸ್ಪತ್ರೆ ಕಟ್ಟಡಕ್ಕೆ ಶಂಕುಸ್ಥಾಪನೆ ಮಾಡಲಾಯಿತು.

ಮೊಳಕಾಲ್ಮುರಿನಲ್ಲಿ ಈವರೆಗೆ ಕಾರ್ಯ ನಿರ್ವಹಿಸುತ್ತಿದ್ದ 50 ಹಾಸಿಗೆಗಳ ಸಾರ್ವಜನಿಕ ಆಸ್ಪತ್ರೆಯನ್ನು 100 ಹಾಸಿಗೆ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಿದ್ದು, ಇದರ ಉದ್ಘಾಟನೆ ಸಹ ಇದೇ ವೇಳೆ ಮಾಡಲಾಯಿತು ಎಂದು ಮಾಹಿತಿ ನೀಡಿದರು.

ಬಿ.ಜಿ. ಕೆರೆ ಮತ್ತು ಕೊಂಡ್ಲಹಳ್ಳಿಯಲ್ಲಿ ರಾಜ್ಯದಲ್ಲಿಯೇ ಪ್ರಥಮವಾಗಿ ್ಙ 60 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಶಿಕ್ಷಕರ ವಸತಿ ಸಮುಚ್ಚಯ ಕಟ್ಟಡಗಳು ಮತ್ತು ಕೊಂಡ್ಲಹಳ್ಳಿಯಲ್ಲಿ ್ಙ 25 ಲಕ್ಷ ವೆಚ್ಚದ ಸರ್ಕಾರಿ ಬಾಲಕರ ಮೆಟ್ರಿಕ್‌ಪೂರ್ವ ವಿದ್ಯಾರ್ಥಿನಿಲಯ ಕಟ್ಟಡ ಉದ್ಘಾಟನೆ ಮಾಡಲಾಯಿತು ಎಂದು ಕರುಣಾಕರ ರೆಡ್ಡಿ ತಿಳಿಸಿದರು.

ಆರೋಗ್ಯ ಸಚಿವ ಬಿ. ಶ್ರೀರಾಮುಲು, ಶಾಸಕರಾದ ಎನ್.ವೈ. ಗೋಪಾಲಕೃಷ್ಣ, ಜಿ.ಎಚ್. ತಿಪ್ಪಾರೆಡ್ಡಿ, ಜಿ.ಪಂ. ಅಧ್ಯಕ್ಷ ಸಿ. ಮಹಾಲಿಂಗಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಚಂದ್ರಪ್ಪ, ಸಿಇಒ ರಂಗೇಗೌಡ, ಸದಸ್ಯರಾದ ಎಚ್.ಟಿ. ನಾಗರೆಡ್ಡಿ, ಮಾರಕ್ಕ ಓಬಯ್ಯ, ನರಸಮ್ಮ ಗೋವಿಂದಪ್ಪ, ಗಡಿ ಪ್ರಾಧಿಕಾರ ಸದಸ್ಯ ಕೆ.ಜಿ. ಪಾರ್ಥಸಾರಥಿ, ಹೆಚ್ಚುವರಿ ಜಿಲ್ಲಾಧಿಕಾರಿ ನಿರ್ವಾಣಪ್ಪ, ತಾ.ಪಂ. ಅಧ್ಯಕ್ಷೆ ರತ್ನಮ್ಮ ಮಹೇಶ್, ಉಪಾಧ್ಯಕ್ಷೆ ಕವಿತಾ, ಇಒ ಬಿ.ಎಸ್. ಮಂಜುನಾಥ್, ಡಿಎಚ್‌ಒ ಡಾ.ವೆಂಕಟಶಿವಾರೆಡ್ಡಿ, ಟಿಎಚ್‌ಒಡಾ.ಪದ್ಮಾವತಿ, ಬಿಇಒಬಿ. ಉಮಾದೇವಿ ಮತ್ತು ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು, ಗ್ರಾ.ಪಂ. ಅಧ್ಯಕ್ಷರು, ತಾ.ಪಂ. ಸದಸ್ಯರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.