ADVERTISEMENT

ಚಿತ್ರದುರ್ಗ: 29 ಜನರಿಗೆ ಕೋವಿಡ್‌ ದೃಢ

​ಪ್ರಜಾವಾಣಿ ವಾರ್ತೆ
Published 20 ಜುಲೈ 2020, 14:11 IST
Last Updated 20 ಜುಲೈ 2020, 14:11 IST

ಚಿತ್ರದುರ್ಗ: ಜಿಲ್ಲೆಯಲ್ಲಿ ಸೋಮವಾರ 29 ಜನರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 247ಕ್ಕೆ ಏರಿಕೆಯಾಗಿದೆ. ಚಳ್ಳಕೆರೆಯಲ್ಲಿ ಭಾನುವಾರ ಮೃತಪಟ್ಟ 68 ವರ್ಷದ ಪುರುಷನಲ್ಲಿ ಕೊರೊನಾ ಸೋಂಕು ಇತ್ತು ಎಂಬುದು ಖಚಿತವಾಗಿದೆ.

ಸೋಮವಾರ 182 ಜನರ ಗಂಟಲು, ಮೂಗು ದ್ರವದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ರ‍್ಯಾಪಿಡ್‌ ಆಂಟಿಜನ್‌ ಕಿಟ್‌ ಮೂಲಕ 157 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ಪೈಕಿ 29 ಜನರಲ್ಲಿ ಸೋಂಕು ಪತ್ತೆಯಾಗಿದೆ. 117 ಜನರು ಗುಣಮುಖರಾಗಿದ್ದು, 125 ಸಕ್ರಿಯ ಪ್ರಕರಣ ಜಿಲ್ಲೆಯಲ್ಲಿವೆ.

ಚಿತ್ರದುರ್ಗ ತಾಲ್ಲೂಕಿನ ಒಂದು ವರ್ಷದ ಮಗು ಸೇರಿ 14 ವರ್ಷದ ಬಾಲಕ, 33, 61, 45, 51, 40 ವರ್ಷದ ಪುರುಷ ಹಾಗೂ 49, 33, 25 ವರ್ಷದ ಮಹಿಳೆ, 7 ವರ್ಷದ ಬಾಲಕಿಯಲ್ಲಿ ಸೋಂಕು ಪತ್ತೆಯಾಗಿದೆ. ಹೊಸದುರ್ಗ ತಾಲ್ಲೂಕಿನ 55 ವರ್ಷದ ಮಹಿಳೆಗೆ ಕೋವಿಡ್‌ ದೃಢವಾಗಿದೆ.

ADVERTISEMENT

ಹಿರಿಯೂರಿನ 32, 36, 37, 28, 32, 27, 35 ವರ್ಷದ ಪುರುಷರು ಮತ್ತು 48 ವರ್ಷದ ಮಹಿಳೆಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಹೊಳಲ್ಕೆರೆಯ 25, 49 ವರ್ಷದ ಪುರುಷರು, ಚಳ್ಳಕೆರೆ ತಾಲ್ಲೂಕಿನ 27, 49, 52, 35 ವರ್ಷದ ಪುರುಷರು ಹಾಗೂ 35 ವರ್ಷದ ಮಹಿಳೆಗೆ ಕೋವಿಡ್‌ ಇರುವುದು ದೃಢವಾಗಿದೆ.

ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ 35, ಭರಮಸಾಗರದಲ್ಲಿ 2, ಧರ್ಮಪುರದಲ್ಲಿ 19, ಪರಶುರಾಂಪುರದಲ್ಲಿ 9, ಹೊಸದುರ್ಗ ತಾಲ್ಲೂಕು ಬೆಲಗೂರಿನಲ್ಲಿ 14, ಕೆ.ಕೆ.ಪುರದಲ್ಲಿ 3, ಚಳ್ಳಕೆರೆ ತಾಲ್ಲೂಕು ನಾಯಕನಹಟ್ಟಿಯಲ್ಲಿ 4, ಹೊಳಲ್ಕೆರೆ ತಾಲ್ಲೂಕು ಬಿ.ದುರ್ಗದಲ್ಲಿ 6 ಜನ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ 60 ಕಂಟೈನ್‌ಮೆಂಟ್‌ ವಲಯಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.