ADVERTISEMENT

ಚಳ್ಳಕೆರೆ: ವಿವಿಧೆಡೆ ಕಳುವಾಗಿದ್ದ 34 ಬೈಕ್‌ ವಶ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2025, 7:40 IST
Last Updated 10 ಅಕ್ಟೋಬರ್ 2025, 7:40 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಚಳ್ಳಕೆರೆ: ವಿವಿಧ ಜಿಲ್ಲೆಗಳಲ್ಲಿ ಕಳವು ಮಾಡಿದ್ದ 34 ಬೈಕ್‌ಗಳನ್ನು ಗುರುವಾರ ವಶಪಡಿಸಿಕೊಂಡಿರುವ ಇಲ್ಲಿನ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಹಿರಿಯೂರಿನ ಅಜಾದ್‍ ನಗರದ ಲಾರಿ ಚಾಲಕ ಪಿ.ಮಹ್ಮದ್ ಷರೀಪ್ (35) ಬಂಧಿತ.

ADVERTISEMENT

ಚಳ್ಳಕೆರೆಯಲ್ಲಿ 2 ಬೈಕ್‌, ಹೊಸದುರ್ಗದಲ್ಲಿ 4, ಹೊಳಲ್ಕೆರೆ 2, ಹಿರಿಯೂರಿನಲ್ಲಿ ಒಂದು, ಚಿತ್ರದುರ್ಗ ನಗರ 4, ಚಿತ್ರದುರ್ಗ ಬಡಾವಣೆ 6, ದಾವಣಗೆರೆ 3, ತುಮಕೂರು 8, ಶಿವಮೊಗ್ಗ 10, ಚಿಕ್ಕಮಗಳೂರು ಒಂದು ಸೇರಿ ವಿವಿಧೆಡೆ ಕಳುವಾಗಿದ್ದ ₹ 14 ಲಕ್ಷ ಮೌಲ್ಯದ ಒಟ್ಟು 34 ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. 

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಂಜಿತ್‍ಕುಮಾರ್ ಭಂಡಾರು ಹಾಗೂ ಅಧೀಕ್ಷಕ ಶಿವಕುಮಾರ್ ಮಾರ್ಗದರ್ಶನದಲ್ಲಿ ರಚಿಸಲಾಗಿದ್ದ ಉಮೇಶ್ ಈಶ್ವರ ನಾಯ್ಕ, ಸತ್ಯಾನಾಂರಾಯಣ, ಕೆ.ಕುಮಾರ್ ಅಧಿಕಾರಿಗಳ ತಂಡ ಕಾರ್ಯಾಚಾರಣೆ ನಡೆಸಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.