ADVERTISEMENT

ಮೊಳಕಾಲ್ಮುರು: 60 ಟನ್ ಅಕ್ರಮ ಪಡಿತರ ಅಕ್ಕಿ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2019, 13:49 IST
Last Updated 18 ನವೆಂಬರ್ 2019, 13:49 IST
ಮೊಳಕಾಲ್ಮುರು ತಾಲ್ಲೂಕಿನ ಕೋನಾಪುರರದಲ್ಲಿ ಸೋಮವಾರ ಅಧಿಕಾರಿಗಳು ಅಕ್ರಮ ಸಾಗಣೆ ಪಡಿತರ ಅಕ್ಕಿಯನ್ನು ವಶಕ್ಕೆ ಪಡೆದುಕೊಂಡರು.
ಮೊಳಕಾಲ್ಮುರು ತಾಲ್ಲೂಕಿನ ಕೋನಾಪುರರದಲ್ಲಿ ಸೋಮವಾರ ಅಧಿಕಾರಿಗಳು ಅಕ್ರಮ ಸಾಗಣೆ ಪಡಿತರ ಅಕ್ಕಿಯನ್ನು ವಶಕ್ಕೆ ಪಡೆದುಕೊಂಡರು.   

ಮೊಳಕಾಲ್ಮುರು: ಅಕ್ರಮವಾಗಿ ಸಂಗ್ರಹಿಸಿ ಇಟ್ಟಿದ್ದ 60 ಟನ್‌ಗಳಷ್ಟು ಅಕ್ಕಿಯನ್ನು ಸೋಮವಾರ ತಹಶೀಲ್ದಾರ್ ಬಸವರಾಜ್ ನೇತೃತ್ವದ ತಂಡ ತಾಲ್ಲೂಕಿನ ರಾಂಪುರ ಸಮೀಪದ ಕೋನಾಪುರ ಗ್ರಾಮದಲ್ಲಿ ವಶಪಡಿಸಿಕೊಂಡಿದೆ.

ಈ ಅಕ್ಕಿಯು ಅನ್ನಭಾಗ್ಯ ಯೋಜನೆ ಹಾಗೂ ಶಾಲೆಗಳ ಬಿಸಿಯೂಟ ಯೋಜನೆಗೆ ಸೇರಿದ್ದಾಗಿದ್ದು ಅದನ್ನು ಬೆಂಗಳೂರಿಗೆ ಸಾಗಿಸುವ ಹುನ್ನಾರ ನಡೆಸಲಾಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ಈ ಸಂಬಂಧ ಚಿದಾನಂದಪ್ಪ ಹಾಗೂ ಸಣ್ಣ ಮಾರಣ್ಣ ಎನ್ನುವವರ ಮೇಲೆ ದೂರು ದಾಖಲಿಸಲಾಗಿದೆ.

ಸಿಪಿಐ ಗೋಪಾಲ ನಾಯ್ಕ, ರಾಂಪುರ ಎಸ್‌ಐ ಗುಡ್ಡಪ್ಪ, ಆಹಾರ ಇಲಾಖೆಯ ನಿರೀಕ್ಷಕ ಅಬ್ದುಲ್ ರಜಾಕ್‌ ಹಾಗೂ ಸಿಬ್ಬಂದಿ ಇದ್ದರು. ರಾಂಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

15 ದಿನಗಳ ಹಿಂದೆ ಸಹ ರಾಂಪುರ ಸಮೀಪ ಅಪಾರ ಪ್ರಮಾಣದ ಅಕ್ರಮ ಪಡಿತರ ಸಾಗಣೆ ಅಕ್ಕಿಯನ್ನು ಪೊಲೀಸರು ವಶಕ್ಕೆ ಪಡೆದಿದನ್ನು ಇಲ್ಲಿ ಸ್ಮರಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.