ADVERTISEMENT

ಚೆಕ್ ಡ್ಯಾಂ ನಿರ್ಮಾಣಕ್ಕೆ ₹ 7 ಕೋಟಿ: ಶಾಸಕ ಎಂ.ಚಂದ್ರಪ್ಪ

ಬಿ.ದುರ್ಗ ಸಮೀಪದ ಚೆಕ್ ಡ್ಯಾಂಗೆ ಬಾಗಿನ ಅರ್ಪಿಸಿದ ಶಾಸಕ ಎಂ.ಚಂದ್ರಪ್ಪ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2020, 2:57 IST
Last Updated 22 ಅಕ್ಟೋಬರ್ 2020, 2:57 IST
ಹೊಳಲ್ಕೆರೆ ತಾಲ್ಲೂಕಿನ ಬಿ.ದುರ್ಗ ಸಮೀಪದಲ್ಲಿ ನಿರ್ಮಿಸಿರುವ ಬ್ಯಾರೇಜ್ ತುಂಬಿದ್ದು, ಬುಧವಾರ ಶಾಸಕ ಎಂ.ಚಂದ್ರಪ್ಪ ಬಾಗಿನ ಅರ್ಪಿಸಿದರು
ಹೊಳಲ್ಕೆರೆ ತಾಲ್ಲೂಕಿನ ಬಿ.ದುರ್ಗ ಸಮೀಪದಲ್ಲಿ ನಿರ್ಮಿಸಿರುವ ಬ್ಯಾರೇಜ್ ತುಂಬಿದ್ದು, ಬುಧವಾರ ಶಾಸಕ ಎಂ.ಚಂದ್ರಪ್ಪ ಬಾಗಿನ ಅರ್ಪಿಸಿದರು   

ಹೊಳಲ್ಕೆರೆ: ಈ ವರ್ಷ ತಾಲ್ಲೂಕಿನಲ್ಲಿ 17 ಚೆಕ್ ಡ್ಯಾಂ ನಿರ್ಮಿಸಿದ್ದು, ₹ 7 ಕೋಟಿ ವೆಚ್ಚ ಮಾಡಲಾಗಿದೆ ಎಂದು ಶಾಸಕ ಎಂ.ಚಂದ್ರಪ್ಪ ಹೇಳಿದರು.

ತಾಲ್ಲೂಕಿನ ಬಿ.ದುರ್ಗದ ಸಮೀಪ ಬೆಳ್ಳಿಸರ ಹಳ್ಳಕ್ಕೆ ನಿರ್ಮಿಸಿರುವ ಬ್ಯಾರೇಜ್ ಮಂಗಳವಾರ ರಾತ್ರಿ ಸುರಿದ ಮಳೆಗೆ ತುಂಬಿ ಹರಿದಿದ್ದು, ಬುಧವಾರ ಬಾಗಿನ ಅರ್ಪಿಸಿ ಮಾತನಾಡಿದರು.

ಅಂತರ್ಜಲ ಹೆಚ್ಚಿಸಲು ಹಳ್ಳಗಳಿಗೆ ಚೆಕ್ ಡ್ಯಾಂ ಹಾಗೂ ಬ್ಯಾರೇಜ್‌ಗಳನ್ನು ನಿರ್ಮಿಸಲಾಗಿದೆ. ಕೆಲವು ಕಡೆ ಹೊಸ ಕೆರೆ ನಿರ್ಮಿಸಲಾಗಿದೆ. ಈ ವರ್ಷದ ಮಳೆಗೆ ಬಹುತೇಕ ಎಲ್ಲ ಚೆಕ್ ಡ್ಯಾಂಗಳು ತುಂಬಿವೆ. ದೊಡ್ಡ ಹಳ್ಳಗಳಿಗೆ ಇನ್ನೂ ಹಲವು ಚೆಕ್ ಡ್ಯಾಂ ನಿರ್ಮಿಸುವ ಉದ್ದೇಶ ಇದ್ದು, ಹರಿಯುವ ನೀರನ್ನು ನಿಲ್ಲಿಸಲಾಗುವುದು ಎಂದು ಹೇಳಿದರು.

ADVERTISEMENT

‘ಬಿ.ದುರ್ಗ ಹೋಬಳಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಅಂದನೂರು ಗೊಲ್ಲರಹಟ್ಟಿಯಿಂದ ಇಂಗಳದಹಳ್ಳಿ, ಬಂಡೆಬೊಮ್ಮೇನಹಳ್ಳಿ, ವಡ್ಡರಹಟ್ಟಿ ಮೂಲಕ ಗಂಜಿಗಟ್ಟೆಗೆ ₹ 4.08 ಕೋಟಿ ವೆಚ್ಚದಲ್ಲಿ 6.25 ಕಿ.ಮೀ. ರಸ್ತೆ ನಿರ್ಮಿಸಲಾಗುತ್ತಿದೆ’ ಎಂದರು.

ಬಿಜೆಪಿ ಮುಖಂಡ ಬಿ.ದುರ್ಗ ಲಿಂಗರಾಜು, ಉದ್ಯಮಿ ಇಂದ್ರಣ್ಣ, ರುದ್ರೇಶ್ ಗೌಡ, ಬಸಣ್ಣ, ವಿಜಯ್ ಕುಮಾರ್, ಗುತ್ತಿಗೆದಾರ ರಾಜಶೇಖರ್, ನಾಗರಾಜಪ್ಪ, ಮಹೇಶ್, ರಂಗಣ್ಣ, ಮರುಳಸಿದ್ದಪ್ಪ, ಪಣಿಯಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.