ADVERTISEMENT

ಅಪಘಾತ; ಬೈಕ್ ಸವಾರ ಗಂಭೀರ ಗಾಯ

​ಪ್ರಜಾವಾಣಿ ವಾರ್ತೆ
Published 2 ಜನವರಿ 2026, 8:03 IST
Last Updated 2 ಜನವರಿ 2026, 8:03 IST
   

ನಾಯಕನಹಟ್ಟಿ: ವೇಗವಾಗಿ ಬಂದ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಪಕ್ಕದಲ್ಲಿರುವ ಸಿಮೆಂಟ್ ಕಂಬಕ್ಕೆ ಅಪ್ಪಳಿಸಿದ ಪರಿಣಾಮ ಬೈಕ್‌ ಸವಾರ ಗಂಭೀರವಾಗಿ ಗಾಯಗೊಂಡಿದ್ದಾನೆ.

ನಾಯಕನಹಟ್ಟಿ ಹೋಬಳಿಯ ಗಜ್ಜುಗಾನಹಳ್ಳಿ ಗ್ರಾಮದ ಪ್ರಕಾಶ್ ಗಾಯಗೊಂಡ ಸವಾರ.

ಗುರುವಾರ ಪ್ರಕಾಶ್ ಮತ್ತು ಆತನ ಸ್ನೇಹಿತ ಚಳ್ಳಕೆರೆಯಿಂದ ಗಜ್ಜುಗನಹಳ್ಳಿ ಗ್ರಾಮಕ್ಕೆ ತೆರಳುವಾಗ ಚಳ್ಳಕೆರೆ ಸಮೀಪದ ಹೊಸೂರು ಬಳಿ ಬರುವಾಗ ಇಳಿಜಾರಿಗೆ ವೇಗವಾಗಿ ಸಾಗಿದ ಬೈಕ್ ನಿಯಂತ್ರಣತಪ್ಪಿ ಸಿಮೆಂಟ್ ಕಂಬಕ್ಕೆ ಬೈಕ್ ಅಪ್ಪಳಿಸಿದೆ. ಪರಿಣಾಮ ಬೈಕ್ ಸವಾರನ ತಲೆಗೆ ಗಂಭೀರವಾಗಿ ಪೆಟ್ಟುಬಿದ್ದಿದೆ.

ADVERTISEMENT

ನೆರವಿಗೆ ಧಾವಿಸಿದ ಎನ್.ರಘುಮೂರ್ತಿ: ಹೊಸವರ್ಷದ ನಿಮಿತ್ತ ನಾಯಕನಹಟ್ಟಿ ಗುರುತಿಪ್ಪೇರುದ್ರಸ್ವಾಮಿ ದೇಗುಲಕ್ಕೆ ಬಂದಿದ್ದ ನಿವೃತ್ತ ಕೆಎಎಸ್ ಅಧಿಕಾರಿ ಎನ್.ರಘುಮೂರ್ತಿ ಮರಳಿ ಚಳ್ಳಕೆರೆಗೆ ತೆರಳುತ್ತಿರುವಾಗ ಈ ಬೈಕ್ ಅಪಘಾತ ನಡೆದಿದೆ. ಅಪಘಾತದಿಂದ ನರಳುತ್ತಿದ್ದ ವ್ಯಕ್ತಿಯನ್ನು ಉಪಚರಿಸಿ ಆಂಬುಲೆನ್ಸ್ ಬರುವುದು ತಡವಾಗುತ್ತದೆ ಎಂದು ತಮ್ಮ ಕಾರಿನಲ್ಲಿ ಚಳ್ಳಕೆರೆಯ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದರು. ಬಳಿಕ ಹೆಚ್ಚಿನ ಚಿಕಿತ್ಸಗೆ ಚಿತ್ರದುರ್ಗದ ಬಸವೇಶ್ವರ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.