ADVERTISEMENT

ಚಿಕ್ಕಜಾಜೂರು: ಶ್ರದ್ಧಾ ಭಕ್ತಿಯಿಂದ ಅಜ್ಜಿ ಹಬ್ಬ ಆಚರಣೆ

​ಪ್ರಜಾವಾಣಿ ವಾರ್ತೆ
Published 19 ಜುಲೈ 2025, 7:19 IST
Last Updated 19 ಜುಲೈ 2025, 7:19 IST
ಅಜ್ಜಿ ಹಬ್ಬದ ಪ್ರಯುಕ್ತ ಶುಕ್ರವಾರ ಚಿಕ್ಕಜಾಜೂರಿನ ಚಿಗನಾರಪ್ಪ ವೃತ್ತದಲ್ಲಿರುವ ಅಮ್ಮನ ಕಟ್ಟೆಗೆ ಭಕ್ತರು ಅಮ್ಮನ ಕೇಲುಗಳನ್ನು ತಂದು ಒಪ್ಪಿಸಿದರು
ಅಜ್ಜಿ ಹಬ್ಬದ ಪ್ರಯುಕ್ತ ಶುಕ್ರವಾರ ಚಿಕ್ಕಜಾಜೂರಿನ ಚಿಗನಾರಪ್ಪ ವೃತ್ತದಲ್ಲಿರುವ ಅಮ್ಮನ ಕಟ್ಟೆಗೆ ಭಕ್ತರು ಅಮ್ಮನ ಕೇಲುಗಳನ್ನು ತಂದು ಒಪ್ಪಿಸಿದರು   

ಚಿಕ್ಕಜಾಜೂರು: ಗ್ರಾಮದಲ್ಲಿ ಶುಕ್ರವಾರ ಅಜ್ಜಿ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.

ಸಂಜೆ ಗ್ರಾಮದ ಪ್ರತಿಯೊಂದು ಮನೆಯವರು ಅಮ್ಮನ ಕುಡಿಕೆಯನ್ನು ಬೇವಿನ ಸೊಪ್ಪು, ಹೂವುಗಳಿಂದ ಅಲಂಕರಿಸಲಾಗಿತ್ತು. ಪೂಜಾ ಸಾಮಗ್ರಿಗಳೊಂದಿಗೆ ಗ್ರಾಮದ ವಿವಿಧ ಬಡಾವಣೆಗಳ ನಿವಾಸಿಗಳು ಚಿಗನಾರಪ್ಪ ವೃತ್ತದಲ್ಲಿರುವ ಅಮ್ಮನ ಕಟ್ಟೆಗೆ ತಂದು ಅರ್ಪಿಸುತ್ತಿದ್ದ ದೃಶ್ಯ ಕಂಡು ಬಂದಿತು.

ಜನತಾ ಕಾಲೊನಿ, ಸಿದ್ದರಾಮೇಶ್ವರ ಬಡಾವಣೆ ಮತ್ತು ಹೊಸನಗರ ಬಡಾವಣೆಯ ಭಕ್ತರು ಸಿದ್ದರಾಮೇಶ್ವರ ಪ್ರೌಢಶಾಲೆಯ ಮುಂಭಾಗದ ಬನ್ನಿ ಮತ್ತು ಅಶ್ವತ್ಥ ಕಟ್ಟೆಗೆ ಅಮ್ಮನ ಕೇಲು ಮತ್ತು ಪೂಜಾ ಸಾಮಗ್ರಿಗಳನ್ನು ಸಲ್ಲಿಸಿ ಪೂಜಿಸಿದರು.

ADVERTISEMENT

ಸೂರ್ಯಾಸ್ತದ ನಂತರ ಮಹಾ ಮಂಗಳಾರತಿ ಮಾಡಿ, ಎಲ್ಲ ಕೇಲುಗಳು ಹಾಗೂ ಪೂಜಾ ವಸ್ತುಗಳನ್ನು ಟ್ರ್ಯಾಕ್ಟರ್‌ನಲ್ಲಿ ತುಂಬಿಕೊಂಡು ಗ್ರಾಮದ ಗಡಿಯಲ್ಲಿ ಬಿಡಲಾಯಿತು. ಈ ರೀತಿ ವರ್ಷಕ್ಕೊಮ್ಮೆ ಪೂಜೆ ಸಲ್ಲಿಸಿದರೆ, ಗ್ರಾಮ ರೋಗ ಮುಕ್ತವಾಗುವುದು ಮತ್ತು ಮಳೆ, ಬೆಳೆ ಸಮೃದ್ಧವಾಗಿ ಬರುವುದು ಎಂಬ ನಂಬಿಕೆ ಗ್ರಾಮಸ್ಥರಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.