ADVERTISEMENT

ವಿಡಿಯೊ: ಚಳ್ಳಕೆರೆ ಇಒ ಮೇಲೆ ಬಿಜೆಪಿ ಮುಖಂಡರಿಂದ ಹಲ್ಲೆ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2022, 7:41 IST
Last Updated 15 ಫೆಬ್ರುವರಿ 2022, 7:41 IST
ಚಳ್ಳಕೆರೆ ಇಒ ಮೇಲೆ ಬಿಜೆಪಿ ಮುಖಂಡರಿಂದ ಮೇಲೆ ಹಲ್ಲೆ
ಚಳ್ಳಕೆರೆ ಇಒ ಮೇಲೆ ಬಿಜೆಪಿ ಮುಖಂಡರಿಂದ ಮೇಲೆ ಹಲ್ಲೆ   

ಚಿತ್ರದುರ್ಗ: ಚಳ್ಳಕೆರೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮಡಗಿನ ಬಸಪ್ಪ ಅವರ ಮೇಲೆ ಬಿಜೆಪಿ ಮುಖಂಡರು ಹಲ್ಲೆ ನಡೆಸಿದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ.

ಬಿಜೆಪಿ ಚಳ್ಳಕೆರೆ ಮಂಡಲದ ಅಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್ ಹಾಗೂ ನಾಲ್ವರು ಸೋಮವಾರ ಕಚೇರಿಗೆ ನುಗ್ಗಿ ಹಲ್ಲೆ ನಡೆಸಿದ್ದರು. ತಾಲ್ಲೂಕು ಪಂಚಾಯತಿ ಕೆಡಿಪಿ ಸಭೆಗೆ ನೂತನ ಸದಸ್ಯರನ್ನು ಆಹ್ವಾನಿಸಿರಲಿಲ್ಲ ಎಂಬ ಆರೋಪ ಮಾಡಿದ್ದರು.

ಹಲ್ಲೆ ನಡೆಸಿದ ಬಿಜೆಪಿಯ ನಾಲ್ವರು ಮುಖಂಡರನ್ನು ಸೋಮವಾರ ರಾತ್ರಿ ಪೊಲೀಸರು ಬಂಧಿಸಿ ಬಿಡುಗಡೆ ಮಾಡಿದ್ದಾರೆ. ಹಲ್ಲೆ ಖಂಡಿಸಿ ಸರ್ಕಾರಿ ನೌಕರರು, ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.