ADVERTISEMENT

ಕವನ ರೂಪದಲ್ಲಿ ತಾಯ್ತನದ ಪ್ರದರ್ಶನ

ಲೇಖಕಿ ಡಾ.ಪಿ.ಭಾರತಿದೇವಿ ಮೆಚ್ಚುಗೆ, ‘ಬಯಲು ಹೂವು’ ಕವನ ಸಂಕಲನ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2022, 13:47 IST
Last Updated 6 ನವೆಂಬರ್ 2022, 13:47 IST
ಚಿತ್ರದುರ್ಗದ ಹೋಟೆಲ್‌ ಐಶ್ವರ್ಯ ಫೋರ್ಟ್‌ನಲ್ಲಿ ಭಾನುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಶಿಕ್ಷಕಿ ಗೀತಾ ಭರಮಸಾಗರ ಅವರ ‘ಬಯಲ ಹೂ’ ಕವನ ಸಂಕಲನ ಬಿಡುಗಡೆ ಮಾಡಿ ಮಾತನಾಡಿದ ಇತಿಹಾಸ ಸಂಶೋಧಕ ಪ್ರೊ.ಬಿ.ರಾಜಶೇಖರಪ್ಪ.
ಚಿತ್ರದುರ್ಗದ ಹೋಟೆಲ್‌ ಐಶ್ವರ್ಯ ಫೋರ್ಟ್‌ನಲ್ಲಿ ಭಾನುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಶಿಕ್ಷಕಿ ಗೀತಾ ಭರಮಸಾಗರ ಅವರ ‘ಬಯಲ ಹೂ’ ಕವನ ಸಂಕಲನ ಬಿಡುಗಡೆ ಮಾಡಿ ಮಾತನಾಡಿದ ಇತಿಹಾಸ ಸಂಶೋಧಕ ಪ್ರೊ.ಬಿ.ರಾಜಶೇಖರಪ್ಪ.   

ಚಿತ್ರದುರ್ಗ: ಸಮಾಜವನ್ನು ಸೂಕ್ಷ್ಮವಾಗಿ ಗ್ರಹಿಸಿ ಕಾವ್ಯ ರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ ಕವಯತ್ರಿ. ಕವನಗಳಲ್ಲಿ ನೋವನ್ನೂ ಬಿಚ್ಚಿಡುವುದರ ಜೊತೆಗೆ ತಾಯ್ತತನವನ್ನು ಪ್ರದರ್ಶನ ಮಾಡಿದ್ದಾರೆ ಎಂದು ಲೇಖಕಿ ಡಾ.ಪಿ.ಭಾರತಿದೇವಿ ಮೆಚ್ಚುಗೆ ವ್ಯಕ್ತಪಡಿಸಿದರು.

ಇಲ್ಲಿನ ಹೋಟೆಲ್‌ ಐಶ್ವರ್ಯ ಫೋರ್ಟ್‌ನಲ್ಲಿ ಭಾನುವಾರ ನೇರಿಶಾ ಪ್ರಕಾಶನ ಏರ್ಪಡಿಸಿದ್ದ ಶಿಕ್ಷಕಿ ಗೀತಾ ಭರಮಸಾಗರ ಅವರ ‘ಬಯಲು ಹೂವು’ ಕವನ ಸಂಕಲನ ಬಿಡುಗಡೆ ಸಮಾರಂಭದಲ್ಲಿ ಕೃತಿ ಕುರಿತು ಅವರು ಮಾತನಾಡಿದರು.

‘ವೈಯಕ್ತಿಕ ಮತ್ತು ಕೆಲಸದ ಒತ್ತಡದಲ್ಲಿ ಮಹಿಳೆ ಬರೆಯುತ್ತಿದ್ದಾಳೆ. ಇಲ್ಲಿನ ಕವಿತೆ ಎಲ್ಲವನ್ನು ಒಳಗೂಂಡಿದೆ. ಹೆಣ್ಣನ್ನು ಶೋಷಣೆಗೆ ಒಳಪಡಿಸುವ ರೀತಿ ಕವನ ಸಂಕಲನದಲ್ಲಿ ವ್ಯಕ್ತವಾಗಿದೆ. ಸಂತೋಷ, ನೋವು, ದುಃಖ ಈ ಕಾವ್ಯಗಳಲ್ಲಿದೆ’ ಎಂದು ವಿವರಿಸಿದರು.

ADVERTISEMENT

‘ಕವಿತೆಗಳಲ್ಲಿ ನವಿರಾದ ಭಾವ ಸಂಬಂಧ ಹುಟ್ಟಿಸುವ ಸಂತೋಷ ಕಂಡು ಬರುತ್ತದೆ. ಪ್ರೀತಿ, ಕರುಣೆ, ತ್ಯಾಗ ಈ ಕನವಗಳಲ್ಲಿವೆ. ರೈತರ ಪರಿಸ್ಥಿತಿ, ಆಗಲಿದ ವ್ಯಕ್ತಿಯ ಬಗ್ಗೆಯೂ ಉತ್ತಮ ಕಾವ್ಯ ಹೊರಹೊಮ್ಮಿದೆ’ ಎಂದು ಹೇಳಿದರು.

ಕೃತಿ ಲೋಕಾರ್ಪಣೆ ಮಾಡಿದ ಸಂಶೋಧಕ ಬಿ.ರಾಜಶೇಖರಪ್ಪ, ‘ಆಧುನಿಕ ತಂತ್ರಜ್ಞಾನದ ಪ್ರಭಾವದಿಂದಾಗಿ ಕವನ ಓದುವವರ ಸಂಖ್ಯೆ ವಿರಳವಾಗುತ್ತಿದೆ. ಕಾವ್ಯದ ಸತ್ವ ಮತ್ತು ಸ್ಫೂರ್ತಿಯೂ ಕಡಿಮೆಯಾಗುತ್ತಿದೆ. ಪ್ರಕಾಶಕರು ಕವನ ಸಂಕಲ ಪ್ರಕಟ ಮಾಡುವುದನ್ನು ಬಿಟ್ಟಿದ್ದಾರೆ’ ಎಂದರು.

‘20ನೇ ಶತಮಾನದಲ್ಲಿ ಉತ್ತಮ ಸಾಹಿತ್ಯ ಪ್ರಕಟವಾಗುತ್ತಿತ್ತು. ನವ್ಯ, ದಲಿತ, ಬಂಡಾಯ ಸಾಹಿತ್ಯದ ಪರಂಪರೆ ಬೆಳೆದು ಬಂದವು. ಸಾಹಿತ್ಯ ನಿಲ್ಲುವುದಿಲ್ಲ, ನಡೆದುಕೊಂಡು ಹೋಗುತ್ತದೆ. ಕಾವ್ಯದ ಜಗತ್ತು ಸೂಕ್ಷ್ಮವಾದದು. ಕವಿ ತನ್ನ ಅನುಭವವನ್ನು ಕಾವ್ಯದ ರೂಪದಲ್ಲಿ ಇಡುತ್ತಾನೆ’ ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಕೆ.ಎಂ.ಶಿವಸ್ವಾಮಿ, ನಗರಠಾಣೆಯ ಪೊಲೀಸ್‌ ಇನ್‌ಸ್ಪೆಕ್ಟರ್‌ ತಿಪ್ಪೇಸ್ವಾಮಿ, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಆರ್‌.ಮಾರುತೇಶ್, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಸಂಪತ್ ಕುಮಾರ್, ಹನುಮಂತಪ್ಪ, ರಾಜಾನಾಯ್ಕ್, ಲೇಖಕಿ ಗೀತಾ ಭರಮಸಾಗರ, ಬಿ.ಎಂ.ಗುರುನಾಥ್‌, ನೇರಿಶಾ ಪ್ರಕಾಶನದ ನಂರುಶಿ ಕಡೂರು, ಕೆಪಿಎಂ ಗಣೇಶಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.