ADVERTISEMENT

‘ಬ್ರಾಹ್ಮಣ್ಯ’ ಕೃತಿ ಬಿಡುಗಡೆ, ಸಂವಾದ ನಾಳೆ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2025, 14:16 IST
Last Updated 1 ಏಪ್ರಿಲ್ 2025, 14:16 IST
ಎಚ್.ಪಿ.ಮಂಜಪ್ಪ
ಎಚ್.ಪಿ.ಮಂಜಪ್ಪ   

ಸಾಗರ: ಇಲ್ಲಿನ ರೈಲ್ವೆ ನಿಲ್ದಾಣ ಸಮೀಪದ ಅಜಿತ ಸಭಾಭವನದಲ್ಲಿ ಏ.2ರಂದು ಸಂಜೆ 6ಕ್ಕೆ ನಡೆಯಲಿರುವ ಕಾರ್ಯಕ್ರಮದಲ್ಲಿ ‘ಬ್ರಾಹ್ಮಣ್ಯ’ ಕೃತಿ ಬಿಡುಗಡೆಗೊಳ್ಳಲಿದೆ ಎಂದು ಕೃತಿಯ ಕರ್ತೃ ಎಚ್.ಪಿ.ಮಂಜಪ್ಪ ತಿಳಿಸಿದರು.

ಲೇಖಕ ಜಯಪ್ರಕಾಶ್ ಮಾವಿನಕುಳಿ, ಡಾ.ವಿಘ್ನೇಶ್ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದು ಬ್ರಾಹ್ಮಣ್ಯ ಎಂಬ ವಿಷಯದ ಕುರಿತು ಸಂವಾದ ನಡೆಯಲಿದೆ ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಬ್ರಾಹ್ಮಣ್ಯ ಎಂಬುದು ಒಂದು ಜಾತಿಯಲ್ಲ. ಅದೊಂದು ನಾಗರಿಕತೆಯ ಪರಾಕಾಷ್ಠೆಯಾಗಿದೆ. ಜಾತಿ, ಮತ, ಪಂಥ ಮೀರಿದ ಚಿಂತನೆ, ಜ್ಞಾನವನ್ನು ಹೊಂದಿರುವ ಕುರಿತು ಗಂಭೀರ ಚರ್ಚೆ ಮತ್ತು ಚಿಂತನೆಯ ಅಗತ್ಯವಿದೆ. ಈ ನಿಟ್ಟಿನಲ್ಲಿ ವಿಶೇಷ ಸಂವಾದ ನಡೆಯಲಿದೆ’ ಎಂದು ಅವರು ತಿಳಿಸಿದರು.

ADVERTISEMENT

ಬ್ರಾಹ್ಮಣ್ಯದ ಅರ್ಥವನ್ನು ಸೀಮಿತ ಚೌಕಟ್ಟಿನಲ್ಲಿ ನೋಡಲಾಗುತ್ತಿದೆ. ಇದರ ವಿಶಾಲವಾದ ಅರ್ಥವನ್ನು ಎಲ್ಲರಿಗೂ ಮನವರಿಕೆ ಮಾಡಬೇಕಿದೆ. ಈ ಹಿನ್ನೆಲೆಯಲ್ಲಿ ಬ್ರಾಹ್ಮಣ್ಯದ ಪರ ಮತ್ತು ವಿರುದ್ಧ ಇರುವವರು ಸಹ ಸಂವಾದದಲ್ಲಿ ಪಾಲ್ಗೊಳ್ಳಬಹುದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.