ADVERTISEMENT

ಹೊಸದುರ್ಗ: ಮೇಕೆ ಹೊತ್ತೊಯ್ದಿದ್ದ ಚಿರತೆ ಸೆರೆ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2021, 4:37 IST
Last Updated 16 ಡಿಸೆಂಬರ್ 2021, 4:37 IST
ಅರಣ್ಯ ಇಲಾಖೆ ಅಳವಡಿಸಿದ್ದ ಬೋನಿಗೆ ಚಿರತೆ ಮರಿ ಸೆರೆ ಸಿಕ್ಕಿದೆ.
ಅರಣ್ಯ ಇಲಾಖೆ ಅಳವಡಿಸಿದ್ದ ಬೋನಿಗೆ ಚಿರತೆ ಮರಿ ಸೆರೆ ಸಿಕ್ಕಿದೆ.   

ಹೊಸದುರ್ಗ: ತಾಲ್ಲೂಕಿನ ಆನಿವಾಳ ಗ್ರಾಮದಲ್ಲಿ ಮೇಕೆ ಶೆಡ್‍ ಮೇಲೆ ದಾಳಿ ಮಾಡಿದ್ದ ಚಿರತೆ ಮರಿಯೊಂದು ಅರಣ್ಯ ಇಲಾಖೆ ಅಳವಡಿಸಿದ್ದ ಬೋನಿಗೆ ಮಂಗಳವಾರ ರಾತ್ರಿ ಸೆರೆಯಾಗಿದೆ.

ಗ್ರಾಮದ ಚಂದ್ರಪ್ಪ ಅವರ ಶೆಡ್‌ನಲ್ಲಿ ಮೂರು ದಿನಗಳ ಹಿಂದಷ್ಟೇ ನುಗ್ಗಿದ್ದ ಚಿರತೆ ಮೇಕೆಯನ್ನು ಹೊತ್ತೊಯ್ದು ಅರ್ಧ ಭಾಗವನ್ನು ತಿಂದು ಉಳಿದ ಅರ್ಧ ದೇಹವನ್ನು ಗ್ರಾಮದ ಹೊರವಲಯದಲ್ಲಿ ಬಿಟ್ಟು ಹೋಗಿತ್ತು. ಗಾಬರಿಗೊಂಡ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಬೋನು ಇಟ್ಟಿದ್ದರು.

ಗ್ರಾಮದ ಹೊರವಲಯದಲ್ಲಿ ಇನ್ನೆರಡು ಚಿರತೆಗಳು ಕಾಣಿಸಿಕೊಂಡಿದ್ದು, ಅವುಗಳ ಸೆರೆಗೆ ಕುಂದೂರು ಗೊಲ್ಲರಹಟ್ಟಿ ಹಾಗೂ ಆನಿವಾಳ ಗ್ರಾಮಗಳಲ್ಲಿ ಬೋನ್ ಇಟ್ಟಿದ್ದಾರೆ.

ADVERTISEMENT

‘ಹಿರಿಯ ಅಧಿಕಾರಿಗಳ ನಿರ್ದೇಶನದ ಮೇರೆಗೆ ಸೆರೆಸಿಕ್ಕ ಒಂದೂವರೆ ವರ್ಷದ ಚಿರತೆ ಮರಿಯನ್ನು ಬಿಳಿಗಿರಿ ರಂಗಯ್ಯನ ಬೆಟ್ಟಕ್ಕೆ ಬಿಡಲಾಗಿದೆ’ ಎಂದು ಅರಣ್ಯ ಇಲಾಖೆ ಅಧಿಕಾರಿ ಸುಜಾತ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.