ADVERTISEMENT

ಕರುಳ ಸಂಬಂಧ ಬೆಸೆಯುವ ಶಕ್ತಿ ಮಾತೃಭಾಷೆಗಿದೆ: ಶಿವಲಿಂಗಪ್ಪ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2025, 8:31 IST
Last Updated 2 ಡಿಸೆಂಬರ್ 2025, 8:31 IST
ಚಳ್ಳಕೆರೆ ತಾಲ್ಲೂಕಿನ ನಗರಂಗೆರೆ ಗ್ರಾಮದಲ್ಲಿ ಸೋಮವಾರ ಕರ್ನಾಟಕ ರಾಜ್ಯೋತ್ಸವ ಸಮಾರಂಭ ನಡೆಯಿತು
ಚಳ್ಳಕೆರೆ ತಾಲ್ಲೂಕಿನ ನಗರಂಗೆರೆ ಗ್ರಾಮದಲ್ಲಿ ಸೋಮವಾರ ಕರ್ನಾಟಕ ರಾಜ್ಯೋತ್ಸವ ಸಮಾರಂಭ ನಡೆಯಿತು   

ಚಳ್ಳಕೆರೆ: ಸಮಾಜದ ಜನರ ನಡುವೆ ಕರುಳ ಸಂಬಂಧ ಬೆಸೆಯುವ ಶಕ್ತಿ ಮಾತೃಭಾಷೆಗಿದೆ ಎಂದು ಬಂಡಾಯ ಸಾಹಿತಿ ಪ್ರೊ.ಸಿ. ಶಿವಲಿಂಗಪ್ಪ ಹೇಳಿದರು.

ತಾಲ್ಲೂಕಿನ ನಗರಂಗೆರೆ ಗ್ರಾಮದ ಕನ್ನಡ ಹಿತಾರಕ್ಷಣಾ ವೇದಿಕೆ ಸೋಮವಾರ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡಿದರು.

ಪ್ರಾಕೃತ, ಪಾಳಿ ಹಾಗೂ ಸಂಸ್ಕೃತವನ್ನೇ ಜೀರ್ಣಿಸಿಕೊಂಡು ಬೆಳೆದಿರುವ ಕನ್ನಡ ಭಾಷೆಗೆ ಹಿಂದಿ ಮತ್ತು ಇಂಗ್ಲಿಷನ್ನು ಮೆಟ್ಟಿನಿಲ್ಲುವ ಸಾಮರ್ಥ್ಯವಿದೆ.ಈ ನೆಲದ ಜನರ ಅಂತರಾಳದ ನೋವು–ನಲಿವಿಗೆ ಧ್ವನಿಯಾಗಿರುವ ತಾಯ್ತನದ ಗುಣವಿರುವ ಕನ್ನಡವನ್ನು ನಾವೆಂದೂ ಮರೆಯಬಾರದು ಎಂದು ಹೇಳಿದರು.

ADVERTISEMENT

ಗ್ರಾಮದ ದೇವಸ್ಥಾನ ಮತ್ತು ನೂತನ ರಥ ನಿರ್ಮಾಣ ಸೇರಿ 29. ಲಕ್ಷ ದೇಣಿಗೆ ನೀಡಲಾಗುವುದು. ಆಟೊ ಚಾಲಕರಿಗೆ ಉಚಿತ ಡಿಎಲ್ ಮತ್ತು ಕನ್ನಡ ನಾಡು, ನುಡಿ ಚಟುವಟಿಕೆಗಳಿಗೆ ಹೆಚ್ಚು ಆರ್ಥಿಕ ನೆರವು ನೀಡುವುದಾಗಿ ಶಿಮೂಲ್ ಹಾಲು ಉತ್ಪಾದಕರ ಸಹಕಾರ ಒಕ್ಕೂಟದ ಜಿಲ್ಲಾ ಘಟಕದ ನಿರ್ದೇಶಕ ಬಿ.ಸಿ. ಸಂಜೀವಮೂರ್ತಿ ಭರವಸೆ ನೀಡಿದರು. 

ಕನ್ನಡದ ಬಗ್ಗೆ ಪ್ರತಿಯೊಬ್ಬರಿಗೂ ಬದ್ಧತೆ ಇರಬೇಕು. ಗ್ರಾಮೀಣ ಜನರ ಮನಸಿನಲ್ಲಿ ಕನ್ನಡದ ಅಭಿಮಾನದ ಚಿಂತನೆಗಳನ್ನು ಬಿತ್ತುವ ಕೆಲಸವಾಗಬೇಕು ಎಂದು ಕವಿ ಕೊರಲಕುಂಟೆ ತಿಪ್ಪೇಸ್ವಾಮಿ ಹೇಳಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಗಳಮ್ಮ, ಸಂಗೀತ ಮತ್ತು ನೃತ್ಯನಿಕೇತನ ಕೇಂದ್ರದ ವ್ಯವಸ್ಥಾಪಕ ಯು.ಎಸ್. ವಿಷ್ಣುಮೂರ್ತಿ ರಾವ್, ಗ್ರಾಮದ ಮುಖಂಡ ಅಜ್ಮತ್‍ವುಲ್ಲಾ ಮಾತನಾಡಿದರು.

ಗ್ರಾಮದ ಮುಖಂಡ ಬೋರಣ್ಣ, ರುದ್ರಣ್ಣ, ದ್ಯಾಮಣ್ಣ, ಬಿ.ಸಿ.ವೆಂಕಟೇಶಮೂರ್ತಿ, ಗುತ್ತಿಗೆದಾರ ಜಗದೀಶ್, ಸಂಜೀವಪ್ಪ, ಎಂ.ಎಸ್.ಮೃತ್ಯಂಜ, ಚಂದ್ರಣ್ಣ, ಮಂಜುನಾಥ್, ರವಿಕುಮಾರ್, ಮಾರುತಿ, ಸುರೇಶ್‍ಬಾಬು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.