ಚಳ್ಳಕೆರೆ: ನಿವೇಶನ, ವಸತಿ, ದಾರಿ, ಸ್ಮಶಾನ ಭೂಮಿ ಮಂಜೂರು ಮುಂತಾದ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದಲಿತ ವಿಮೋಚನಾ ಮಾನವ ಹಕ್ಕುಗಳ ವೇದಿಕೆ ಮತ್ತು ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ತಾಲ್ಲೂಕು ಕಚೇರಿ ಮುಂದೆ ಸೋಮವಾರ ಧರಣಿ ನಡೆಸಿದರು.
ತಾಲ್ಲೂಕಿನ ಯಲಗಟ್ಟೆ ಗ್ರಾಮದ ರಿಸನಂ 24ರಲ್ಲಿ 2 ಎಕರೆ ಸರ್ಕಾರಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ದಲಿತ ಕುಟುಂಬಗಳಿಗೆ ನಿವೇಶನ ನೀಡುವುದರ ಜತೆಗೆ ವಸತಿ ನಿರ್ಮಿಸಿಕೊಡಬೇಕು ಎಂದು ಒತ್ತಾಯಿಸಿದರು.
ನಾಯಕನಹಟ್ಟಿ ಹೋಬಳಿ ವ್ಯಾಪ್ತಿಯ ರಾಮದುರ್ಗ ಗ್ರಾಮದ ಮಹಿಳೆ ದುರುಗಮ್ಮ ಅವರ 40 ಗ್ರಾಂ ಚಿನ್ನ ಕಳವಾಗಿದ್ದು, ಅದನ್ನು ಪತ್ತೆ ಹಚ್ಚಬೇಕು. ಗೊರ್ಲಕಟ್ಟೆ ಗ್ರಾಮದಲ್ಲಿ ಅತಿಕ್ರಮಣ ಮಾಡಿರುವ ದಲಿತ ಕುಟುಂಬದ ನಿವೇಶನ ಬಿಡಿಸಿಕೊಡಬೇಕು ಎಂದು ಜಿಲ್ಲಾ ಸಂಚಾಲಕಿ ಪಿ.ರೇಣುಕಮ್ಮ ಮನವಿ ಮಾಡಿದರು.
ಚಿಕ್ಕಮ್ಮನಹಳ್ಳಿ ಗ್ರಾಮದ ರಿಸನಂ 13ರಲ್ಲಿ ಒತ್ತುವರಿಯಾಗಿರುವ ಸ್ಮಶಾನ ಜಾಗವನ್ನು ಕೂಡಲೇ ತೆರವುಗೊಳಿಸಬೇಕು. ಗ್ರಾಮದ ದರ್ಕಾಸ್ತು ಭೂಮಿಯಲ್ಲಿ ಓಡಾಡಲು ದಲಿತರಿಗೆ ದಾರಿ ಮಾಡಿಕೊಡಬೇಕು ಎಂದು ಎನ್.ಪ್ರಕಾಶ್ ಆಗ್ರಹಿಸಿದರು.
ಜಿಲ್ಲಾ ಸಂಚಾಲಕ ಎನ್.ಪ್ರಕಾಶ್, ಪಿ.ಜಯಣ್ಣ, ಮಾರುತಿ, ಮಂಜುನಾಥ್ ಮಾತನಾಡಿದರು. ತಾಲ್ಲೂಕು ಘಟಕದ ಸಂಚಾಲಕ ಬಿ.ಓ.ತಿರುಮಲೇಶ್, ಎಂ.ರಾಜಣ್ಣ, ಬೂದಿಹಳ್ಳಿ ಸತೀಶ್, ಪಾತಲಿಂಗಪ್ಪ, ಗೊರ್ಲಕಟ್ಟೆ ಮೈಲಾರಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.