ಸಿರಿಗೆರೆ: ‘ಚಾಮುಂಡಿ ಬೆಟ್ಟ ಹಿಂದೂಗಳಿಗೆ ಸೇರಿದ್ದಲ್ಲ ಎಂಬುದಾಗಿ ಹೇಳುತ್ತಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಅದು ಇಟಲಿ ದೇಶಕ್ಕೆ ಸೇರಿದ್ದು ಎಂಬುದಾಗಿ ಹೇಳಿದರೆ ಖುಷಿ ಆಗಬಹುದೇನೋ’ ಎಂದು ಆಮ್ ಆದ್ಮಿ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಇ. ಜಗದೀಶ್ ವ್ಯಂಗ್ಯವಾಡಿದ್ದಾರೆ.
ಪುರಾತನ ಕಾಲದಿಂದಲೂ ಚಾಮುಂಡಿ ಬೆಟ್ಟ, ಅಲ್ಲಿ ನೆಲೆಸಿರುವ ದೇವಿ ಹಾಗೂ ಸಮಾಜ ಸೇವೆ ಮಾಡಿ ಜಗತ್ತಿಗೇ ಮಾದರಿಯಾದ ಮೈಸೂರು ರಾಜಮನೆತನದ ಬಗ್ಗೆ ಜನರಿಗೆ ಸದ್ಭಾವನೆ ಇದೆ. ಅದನ್ನು ಹಾಳು ಮಾಡಲು ಯಾರೂ ಪ್ರಯತ್ನ ಮಾಡಬಾರದು. ಅದರಲ್ಲೂ ಆಡಳಿತದ ಚುಕ್ಕಾಗಿ ಹಿಡಿದಿರುವವರು ಇಂತಹ ವಿಚಾರಗಳಲ್ಲಿ ಗಂಭೀರವಾಗಿ ಇರಬೇಕು ಎಂದು ಪತ್ರಿಕಾ ಹೇಳಿಕೆಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ಕಾಂಗ್ರೆಸ್ ನಾಯಕರಿಗೆ ಹಿಂದೂಗಳ ಭಾವನೆಗಳಿಗೆ ಧಕ್ಕೆ ಬರುವಂತೆ ಮಾತನಾಡುವುದೇ ಕೆಲಸವಾಗಿರುವಂತಿದೆ. ಇಂತಹ ಸಂಗತಿಗಳನ್ನು ಬಿಟ್ಟು ರಾಜ್ಯದ ಹಲವು ಸಮಸ್ಯೆಗಳು ಹಾಗೂ ಅವುಗಳನ್ನು ಪರಿಹರಿಸುವ ಬಗ್ಗೆ ಚಿಂತಿಸಬೇಕು. ಇಂತಹ ವಿವಾದ ಸೃಷ್ಟಿಸುವ ವಿಚಾರಗಳಿಂದ ಜನರ ಮನಸ್ಸಿಗೆ ನೋವು ಉಂಟಾಗುತ್ತದೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.