ADVERTISEMENT

ಆಂಧ್ರ ಗಡಿಯಲ್ಲಿ ಚೆಕ್‌ಪೋಸ್ಟ್‌

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2020, 17:22 IST
Last Updated 30 ಮಾರ್ಚ್ 2020, 17:22 IST
ಪರಶುರಾಂಪುರ ಬಳಿಯ ಆಂಧ್ರಪ್ರದೇಶದ ಗಡಿಯಾದ ಪಾತಪ್ಪನಗುಡಿ ಚೆಕ್‌ಪೋಸ್ಟ್ ಬಳಿ ತಪಾಸಣೆ ನಡೆಸಲಾಯಿತು
ಪರಶುರಾಂಪುರ ಬಳಿಯ ಆಂಧ್ರಪ್ರದೇಶದ ಗಡಿಯಾದ ಪಾತಪ್ಪನಗುಡಿ ಚೆಕ್‌ಪೋಸ್ಟ್ ಬಳಿ ತಪಾಸಣೆ ನಡೆಸಲಾಯಿತು   

ಪರಶುರಾಂಪುರ:ಕೊರೊನಾ ಭೀತಿ ಯಿಂದ ರಾಜ್ಯದ ಆಂಧ್ರಪ್ರದೇಶದ ಗಡಿಯಲ್ಲಿ ಚೆಕ್‌ಪೋಸ್ಟ್‌ಗಳನ್ನು ನಿರ್ಮಾಣ ಮಾಡಲಾಗಿದೆ. ಹೋಬಳಿಯ ಪಾತಪ್ಪನಗುಡಿ, ನಾಗಪ್ಪನಹಳ್ಳಿ ಗೇಟ್ ಹಾಗೂ ಬಂಡೆ ಮಾರಮ್ಮನಗುಡಿಯ ಬಳಿಚೆಕ್‌ಪೋಸ್ಟ್‌ ನಿರ್ಮಿಸಿದ್ದು, ಅಂಧ್ರಪ್ರದೇಶದಿಂದ ಯಾರೊಬ್ಬರನ್ನೂ ಕರ್ನಾಟಕದ ಗಡಿಯೊಳಗೆ ಬಿಡುತ್ತಿಲ್ಲ. ರಾಜ್ಯದಿಂದಲೂ ಅಂಧ್ರಪ್ರದೇಶಕ್ಕೆ ಹೋಗುವವರನ್ನು ಬಿಡುತ್ತಿಲ್ಲ.

ಅಂಧ್ರಪ್ರದೇಶ ಮತ್ತು ಕರ್ನಾಟಕದ ಗಡಿ ಭಾಗಗಳಲ್ಲಿ ಎರಡೂ ರಾಜ್ಯಗಳ ಜನರು ಇದ್ದಾರೆ. ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಧಿಕಾರಿ ಆದೇಶದ ಮೇರೆಗೆ ಆ ವ್ಯಾಪ್ತಿಯ ಪಿಡಿಒ, ಆರೋಗ್ಯ ಇಲಾಖೆಯ ಸಿಬ್ಬಂದಿ ಮತ್ತು ಪೋಲಿಸ್ ಇಲಾಖೆಯ ಸಿಬ್ಬಂದಿಗಳನ್ನು ನೇಮಿಸಿ ಹಗಲು ರಾತ್ರಿ ಕಟ್ಟೆಚ್ಚರ
ವಹಿಸಲಾಗಿದೆ.

ರೈತರು ಬೆಳೆದ ಹಣ್ಣು, ತರಕಾರಿ, ದಿನ ಬಳಕೆ ವಸ್ತುಗಳ ಸಾಗಾಣಿಕೆ ಮಾಡುವ ವಾಹನಗಳಿಗೆ ಮಾತ್ರ ಅವಕಾಶ ಕಲ್ಪಿಸಿಕೊಡಲಾಗುವುದು. ಅದನ್ನು ಹೊರತು ಪಡಿಸಿ ಯಾವುದೇ ವಾಹನಗಳನ್ನು ಬಿಡುವುದಿಲ್ಲ ಎಂದು ಪಿಎಸ್ಐ ಮಹೇಶ ಹೊಸಕೋಟೆ ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.