ಹೊಸದುರ್ಗ: ‘ಕರ್ನಾಟಕದ ಉತ್ತಮ ಭವಿಷ್ಯಕ್ಕೆ ಶ್ರಮಿಸಬೇಕೆಂಬ ಹಂಬಲವಿದೆ. ರಾಜಕೀಯದ ಬಗ್ಗೆ ಪ್ರಜ್ಞೆ ಇರಬೇಕು. ಕರ್ನಾಟಕಕ್ಕೆ ಒಂದು ಪರ್ಯಾಯ ಪಕ್ಷದ ಅಗತ್ಯವಿದೆ’ ಎಂದು ಚಿತ್ರನಟ ಚೇತನ್ ಅಹಿಂಸಾ ಅಭಿಪ್ರಾಯಪಟ್ಟರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಆಯೋಜಿಸಿದ್ದ 'ಬದಲಾವಣೆಗಾಗಿ ನಾನು’ ಸಮಾನ ಮನಸ್ಕರೊಂದಿಗಿನ ಸಭೆಯಲ್ಲಿ ಮಾತನಾಡಿದರು.
‘ರಾಜ್ಯದಾದ್ಯಂತ ಸಭೆ ನಡೆಸಿ, ಸಾಮಾಜಿಕ ಕಳಕಳಿ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಕಳೆದ 8ರಿಂದ 10 ತಿಂಗಳಲ್ಲಿ ಒಟ್ಟು 147 ಸಭೆ ನಡೆಸಲಾಗಿದೆ. ಸಮ ಸಮಾಜದ ಕನಸು ಅದರ ವಿಚಾರಗಳನ್ನು ಜನರು ಮುಂದಿಟ್ಟು ಅವರ ವಿಚಾರಗಳನ್ನು ಸಹ ಪಡೆಯಲಾಗುತ್ತಿದೆ. ಒಳ್ಳೆ ಪ್ರತಿಕ್ರಿಯೆ ದೊರೆತಿದೆ. ಹೋರಾಟಗಾರರು, ಚಳವಳಿಗಾರರು, ಸಮಾಜಮುಖಿ ಚಿಂತಕರು, ಯುವಕರು, ವಿದ್ಯಾರ್ಥಿಗಳು ಎಲ್ಲಾ ಚಳವಳಿಗಳಿಗೂ ಭಾಗವಹಿಸಿದ್ದಾರೆ’ ಎಂದು ಹೇಳಿದರು.
‘ಸರ್ಕಾರಿ ಶಾಲೆ, ಆಸ್ಪತ್ರೆ ಅಭಿವೃದ್ಧಿ, ರೈತರ ಸಮಸ್ಯೆ ಪರಿಹಾರ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳು ಆಗಬೇಕು. ಅಂಬೇಡ್ಕರ್ ಕಂಡಂತಹ ಕನಸು ನನಸಾಗಬೇಕು. ನಾನು ಯಾವುದೇ ಕಾರಣಕ್ಕೂ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಸಮಸ್ಯೆಗಳಿಗೆ ಶಾಶ್ವತ ಪರಿಹಾರ ದೊರೆಯಬೇಕು. ಭ್ರಷ್ಟಾಚಾರ, ಕೋಮುವಾದ ನಿಲ್ಲಬೇಕು. ಜಾತ್ಯಾತೀತವಾಗಿ ರಾಜ್ಯದ ಅಭಿವೃದ್ಧಿಗಾಗಿ ಎಲ್ಲಾ ಒಗ್ಗಟ್ಟಾಗಿ ಪಣತೊಡಬೇಕು’ ಎಂದು ಜನರನ್ನು ಹುರಿದುಂಬಿಸಿದರು.
ಈ ವೇಳೆ ಡಿ.ಎಸ್.ಎಸ್. ರಾಜ್ಯ ಸಂಘಟನಾ ಕಾರ್ಯದರ್ಶಿ ಹೆಗ್ಗೆರೆ ರಂಗಪ್ಪ, ಮಾದಿಗ ನೌಕರರ ಸಂಘದ ಅಧ್ಯಕ್ಷ ಮೂರ್ತಪ್ಪ, ಮುಖಂಡರಾದ ಹರ್ಫತ್, ಮಂಜುನಾಥ್, ಕೈನಡು ಚಂದ್ರಪ್ಪ, ಪೀಲಾಪುರ ಕಂಠೇಶ್, ತಿಮ್ಮಣ್ಣ, ಅರುಣ್ ನಾಗೇಂದ್ರಪ್ಪ, ಸುನೀಲ್, ನಾಗು ಮನಸು, ಮುಬಾರಕ್, ನಿಸ್ಸಾರ್ ಅಹಮದ್, ಅನಿಲ್, ಮಂಜು ಸೇರಿದಂತೆ ಹಲವಎಉ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.