ADVERTISEMENT

ಚಿಕ್ಕಜಾಜೂರು | ಮಳೆ; ರಾಗಿ ಪೈರಿಗೆ ಜೀವ ಕಳೆ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2025, 6:24 IST
Last Updated 21 ಅಕ್ಟೋಬರ್ 2025, 6:24 IST
ಭಾನುವಾರ ರಾತ್ರಿ ಸುರಿದ ಮಳೆಯಿಂದಾಗಿ ಚಿಕ್ಕಜಾಜೂರು ಸಮೀಪದ ಅರಸನಘಟ್ಟ ರಸ್ತೆಯಲ್ಲಿ ನೀರು ನಿಂತಿರುವುದು
ಭಾನುವಾರ ರಾತ್ರಿ ಸುರಿದ ಮಳೆಯಿಂದಾಗಿ ಚಿಕ್ಕಜಾಜೂರು ಸಮೀಪದ ಅರಸನಘಟ್ಟ ರಸ್ತೆಯಲ್ಲಿ ನೀರು ನಿಂತಿರುವುದು   

ಚಿಕ್ಕಜಾಜೂರು: ಆಗಾಗ ಬೀಳುತ್ತಿರುವ ಮಳೆಯಿಂದಾಗಿ ರಾಗಿ ಪೈರಿಗೆ ಜೀವ ಕಳೆ ಬಂದಂತಾಗಿದೆ. 

ವಾರಕ್ಕೊಮ್ಮೆ ಹದ ಮಳೆಯಾಗುತ್ತಿದ್ದು, ಬಾಡುತ್ತಿದ್ದ ರಾಗಿ ಪೈರುಗಳಿಗೆ ಜೀವ ಬಂದಂತಾಗಿದೆ. ಶನಿವಾರ ಹಾಗೂ ಭಾನುವಾರ ರಾತ್ರಿ ಮತ್ತೆ ಮಳೆಯಾಗಿರುವುದು ರೈತರ ಮೊಗದಲ್ಲಿ ಸಂತಸ ಮೂಡಿಸಿದೆ. 

ಚಿಕ್ಕಜಾಜೂರು ಸೇರಿದಂತೆ ಸಮೀಪದ ಚಿಕ್ಕಂದವಾಡಿ, ಅರಸನಘಟ್ಟ, ಹನುಮನಕಟ್ಟೆ ಮೊದಲಾದ ಕಡೆಗಳಲ್ಲಿ ಮಳೆಯಾಗಿದ್ದು, ಜಮೀನು ಹಾಗೂ ರಸ್ತೆಗಳಲ್ಲಿ ನೀರು ನಿಂತಿದೆ.

ADVERTISEMENT

ಹೋಬಳಿಯ ಕೆಲವು ರೈತರು ಮೇ ತಿಂಗಳಿನಲ್ಲಿ ಬಿತ್ತನೆ ಮಾಡಿದ್ದ ಮೆಕ್ಕೆಜೋಳವನ್ನು ಕೊಯ್ಲು ಮಾಡಿದ್ದರು. ಕಳೆದ ಬುಧವಾರ ಹದ ಮಳೆಯಾಗಿದ್ದರಿಂದ ಕೆಲವು ಕಡೆಗಳಲ್ಲಿ ಕೆರೆಗಳಿಗೆ ನೀರು ಹರಿದು ಬಂದಿತ್ತು.

ಕಳೆದ ಎರಡು ವಾರಗಳಿಂದ ಆಗಾಗ್ಗೆ ಮಳೆಯಾಗುತ್ತಿರುವುದರಿಂದ ಚಿಕ್ಕಜಾಜೂರಿನ ಜಮೀನೊಂದರಲ್ಲಿ ಹುಲುಸಾಗಿ ಬೆಳೆದು ನಿಂತಿರುವ ರಾಗಿ ಪೈರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.