ಸಿರಿಗೆರೆ: ರಾಷ್ಟ್ರೀಯ ಹೆದ್ದಾರಿ–48ರ ಕಾತ್ರಾಳು ಕೆರೆಯಲ್ಲಿ ಈಜಲು ಹೋದ ವ್ಯಕ್ತಿಯೊಬ್ಬರು ಬುಧವಾರ ಮೃತಪಟ್ಟಿದ್ದಾರೆ.
ಆಂಧ್ರಪ್ರದೇಶದ ಭದ್ರಾಚಲಂನ ಕೆಂಚಲ್ ಬುಜ್ಜಾರೆಡ್ಡಿ ಮೃತಪಟ್ಟವರು.
ಕೊಳವೆಬಾವಿ ಲಾರಿಯಲ್ಲಿ ಕೆಲಸ ಮಾಡುತ್ತಿದ್ದ ಅವರು, ಕೆರೆಯ ದಂಡೆಯ ಬಳಿಯ ಜಗಳೂರು ರಸ್ತೆಯಲ್ಲಿ 3 ದಿನಗಳಿಂದ ಕೆಟ್ಟು ನಿಂತಿದ್ದ ಬೋರ್‌ವೆಲ್ ಲಾರಿಯ ದುರಸ್ತಿ ನಡೆಯುತ್ತಿತ್ತು. ಹೀಗಾಗಿ ಎಂಟು ಜನ ಕಾರ್ಮಿಕರು ಈಜಲು ಕೆರೆಗೆ ಇಳಿದಿದ್ದರು.
ಆಗ ಕೆಂಚಲ್ ಬುಜ್ಜಾರೆಡ್ಡಿ ಈಜುತ್ತಿದ್ದಾಗ ಕಲ್ಲೊಂದು ತಲೆಗೆ ತಾಗಿ ಪೆಟ್ಟು ಬಿದ್ದು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳಕ್ಕೆ ಭರಮಸಾಗರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.