ಭರಮಸಾಗರ: ಸಮೀಪದ ಬಹದ್ದೂರ್‌ಘಟ್ಟ ಗ್ರಾಮದಲ್ಲಿ ಏ.15ರಿಂದ 19ರವರೆಗೆ ಆಂಜನೇಯಸ್ವಾಮಿ ಜಾತ್ರೆ ನಡೆಯಲಿದೆ.
ಏ.15ರಂದು ಆಂಜನೇಯಸ್ವಾಮಿ ಕಂಕಣಧಾರಣೆ ಮತ್ತು ಅರಿಶಿಣ ಎಣ್ಣೆ ಸಮರ್ಪಣೆ ಹಾಗೂ ಉಚ್ಚಾಯ ಉತ್ಸವ ನಡೆಯಲಿದೆ. ಏ.16 ರಂದು ಅರಿಶಿಣ ಎಣ್ಣೆ ಮತ್ತು ಉಚ್ಚಾಯ, ಏ.17ರಂದು ರಾತ್ರಿ 7ಕ್ಕೆ ಆಂಜನೇಯಸ್ವಾಮಿ ರಥೋತ್ಸವ ಜರುಗಲಿದೆ. ಏ.18ರಂದು ಮಧ್ಯಾಹ್ನ 12ಕ್ಕೆ ದೊಡ್ಡ ಎಡೆ, ಬಾಯಿಬೀಗ, ಜವಳ, ಬೆಲ್ಲದಬಂಡಿ ಕಾರ್ಯಕ್ರಮ ನಡೆಯಲಿದೆ. ಏ.19ರಂದು ಬೆಳಿಗ್ಗೆ ಓಕುಳಿ ಕಾರ್ಯದ ನಂತರ ಪ್ರಮುಖ ಬೀದಗಳಲ್ಲಿ ದೇವರ ಉತ್ಸವ ಮೂರ್ತಿ ಮೆರವಣಿಗೆ ಮತ್ತು ಗುಡಿದುಂಬಿಸುವ ಕಾರ್ಯ ನಡೆಯಲಿದೆ ಎಂದು ದೇವಸ್ಥಾನ ಸಮಿತಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.