ಹೊಸದುರ್ಗ: ‘ಯಾವುದೇ ಧರ್ಮದ ಜನರು ಧರ್ಮಾಂಧರಾಗದೆ ಧರ್ಮದಲ್ಲಿರುವ ನಿಜ ತತ್ವವನ್ನು ಅರಿಯಬೇಕು. ಅದರ ತತ್ವವನ್ನು ಅರಿತರೆ ಎಲ್ಲರನ್ನೂ ಪ್ರೀತಿಸುವ, ಎಲ್ಲರೂ ನಮ್ಮವರೆಂಬ ಭಾವ ಬರಲು ಸಾಧ್ಯ’ ಎಂದು ಕುಂಚಿಟಿಗ ಮಠದ ಶಾಂತವೀರ ಸ್ವಾಮೀಜಿ ಅಭಿಪ್ರಾಯಪಟ್ಟರು.
ಕುಂಚಿಟಿಗ ಸಮಾಜ ಹಾಗೂ ಮಠದ ವತಿಯಿಂದ ಈಚೆಗೆ ಆಯೋಜಿಸಿದ್ದ ಸುಜ್ಞಾನ ಸಂಗಮ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಗ್ರಾಮೀಣ ಪ್ರದೇಶದ ಅಭಿವೃದ್ಧಿಗಾಗಿ ಮಠ ವತಿಯಿಂದ ಧನಸಹಾಯ ನೀಡುತ್ತಿದ್ದು, ಈ ಬಾರಿ ಎಚ್.ರೊಪ್ಪ ಗ್ರಾಮಕ್ಕೆ ₹ 2 ಲಕ್ಷ ಚೆಕ್ಕನ್ನು ಹಸ್ತಾಂತರಿಸಲಾಯಿತು.
ದ್ವಿತೀಯ ಪಿಯುಸಿ ಹಾಗೂ ಎಸ್‌ಎಸ್‌ಎಲ್‌ಸಿಯಲ್ಲಿ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದ ಅನುಷಾ ಜೆ. ಹಾಗೂ ಚಿರಾಕ್ಷ ಅವರನ್ನು ಅಭಿನಂದಿಸಲಾಯಿತು. ಕಾರ್ಮಿಕ ದಿನಾಚರಣೆ ಅಂಗವಾಗಿ ಕಾರ್ಮಿಕ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ರಂಗಸ್ವಾಮಿ ಅವರನ್ನು ಅಭಿನಂದಿಸಲಾಯಿತು.
ಚನ್ನಗಿರಿ ಬಿಇಒ ಎಲ್.ಜಯಪ್ಪ, ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಪಿ.ಓಂಕಾರಪ್ಪ, ಮುಖಂಡರಾದ ಬಿ.ಎಸ್.ದ್ಯಾಮಣ್ಣ, ಕೋಡಿಹಳ್ಳಿ ತಮ್ಮಣ್ಣ, ಕಲ್ಕೆರೆ ಶೇಖರಪ್ಪ, ಧರಣಪ್ಪ, ಲೋಕಣ್ಣ, ತಿಪ್ಪೇಸ್ವಾಮಿ, ಶ್ರೀನಿವಾಸ್, ಕುಂಚಶ್ರೀ ಸಂಗಮೇಶ್ವರ ಮಹಿಳಾ ಸಂಘದ ಪದಾಧಿಕಾರಿಗಳು, ಸಂಗಮೇಶ್ವರ ಸಮುದಾಯ ಭವನ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.