ಚಿತ್ರದುರ್ಗ: ಬುಧವಾರ ಪ್ರಕಟವಾದ 10ನೇ ತರಗತಿ ಐಸಿಎಸ್‌ಇ ಫಲಿತಾಂಶದಲ್ಲಿ ನಗರದ ಡಾನ್ ಬಾಸ್ಕೊ ಶಾಲೆ ಉತ್ತಮ ಫಲಿತಾಂಶ ಪಡೆದಿದೆ.
ಸಿದ್ಧಾರ್ಥ ಪಿ. ನಾಡಿಗ್ ಶೇ 95.83, ವಿಕ್ಷೀತಾ ಎನ್ ಶೇ 93.83, ಮಹಮ್ಮದ್ ಮುಸ್ತಫಾ ಕೌಸರ್ ಶೇ 93.66, ಮನ್ವಂತ್ ಎನ್. ಪ್ರಸಾದ್ ಶೇ 93.16 ಫಲಿತಾಂಶದೊಂದಿಗೆ ಶಾಲೆಗೆ ಹಾಗೂ ಪೋಷಕರಿಗೆ ಕೀರ್ತಿ ತಂದಿದ್ದಾರೆ. 84 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಉನ್ನತ ದರ್ಜೆಯಲ್ಲಿ 33, ಪ್ರಥಮ ದರ್ಜೆಯಲ್ಲಿ 47 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಪ್ರಾಂಶುಪಾಲರು, ಶಿಕ್ಷಕರು ಹಾಗೂ ಆಡಳಿತ ಮಂಡಳಿ ಸದಸ್ಯರು ಅಭಿನಂದಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.